ನಿನ್ನ ಪ್ರೀತಿಸದ ಹೊರತು ನನಗಿಲ್ಲ ಮುಕ್ತಿ
ಹೊರಟಿರುವೆ ನಿನ್ನ ಒಲವಿನಿಂದ ದೂರ ಆಗಾಗ
ಜೇಡರಬಲೆಯಲ್ಲಿನ ಹುಳು ನಾನೀಗ
ನಾಜೂಕಾಗಿ ಹೆಣೆದೆ ಪ್ರೇಮದ ಬಲೆಯ ನೀನು
ಸೂಜಿಗಲ್ಲಿನಂತ ನಿನ್ನ ಸೆಳೆತಕ್ಕೆ ಸಿಕ್ಕವನು ನಾನು
ಪ್ರೇಮದ ಹೊಳೆಯಲ್ಲಿ ಈಜು ಬಾರದವನ ಸಿಕ್ಕಿಸಿದೆ
ಎಂದೂ ಎಡವದ ನಾನು ಒಮ್ಮೆಗೆ ಮುಗ್ಗರಿಸಿದೆ
ನನಗಿದು ತರವಲ್ಲವೆಂದು ಪ್ರತಿಭಟಿಸಿದೆ, ಆರ್ಭಟಿಸಿದೆ
ನನ್ನಚ್ಚರಿಯ ಕಂಡು ನೀನು ಮೆಲ್ಲನೆ ಉಸುರಿದಳು. . .
ಸತ್ತವನ ಸ್ವರ ಹೇಗೆ ತಾನೆ ತಲುಪೊತ್ತೆ ಜನರಿಗೆ
ಪ್ರೇಮಸುಳಿಗೆ ಸಿಕ್ಕ ಕ್ಷಣವೇ ಸತ್ತ ನೀ ಲೋಕದ ಪಾಲಿಗೆ