ಇದ್ದಗವಳ ನಾ ನೋಡಲಾಗಲಿಲ್ಲ(ಎಂಬ ಖೇದವಿದೆ, ಸತ್ತಮೇಲೆ ಅವಳ ನೋಡುವ ಮನಸ್ಸಿಲ್ಲ)
ದು:ಖ ಮಡುಗಟ್ಟಿದೆ ನನ್ನ ಎದೆಯಲ್ಲಿ
ರೋಷವಿದೆ ದೇವರ ಬಗ್ಗೆ ಮನದಲ್ಲಿ
ಮೆಚ್ಚಿದ್ದೆ ನಾನವಳ ಕಾಯಕವ
ವಿದ್ಯೆಯ ಬಗ್ಗೆ ಅವಳಿಗಿದ್ದ ಒಲವ
ಸುಂದರ ಕನಸುಗಳ ಮೂಟೆಗಳ ಹೊತ್ತು ನಡೆದಳು
ಕನಸುಗಳಾ ಭಾರ ಹೆಚ್ಚಾಯಿತೇನೊ ಪಾಪ, ಕುಸಿದುಬಿದ್ದಳು
ಅಸೂಯೆಯಾಯಿತೇನೊ ದೇವರಿಗೆ ನಿನ್ನ ಬಗ್ಗೆ
ಪರರಿಗೆ ನೀನು ನೆರವಾಗುವ ರೀತಿಯ ಬಗ್ಗೆ
ಇದೇನೂ ಸ್ವಯಂಕೃತವೋ, ಪರಕೃತವೋ
ಆಕಸ್ಮಿಕವೋ, ಅಪಘಾತವೋ
ಒಟ್ಟಿನಲ್ಲಿ (ಆಘಾತ)ವಿಪರೀತವಾಯಿತು
ದೇವರು ಕಲ್ಲೆಂಬ ಮಾತು ನಿಜವಾಯಿತು.
ಆಗಲಿದರೂ ನೀನು ಉಳಿಯುವೆ ನನ್ನ ಮನದಲ್ಲಿ
ನನ್ನ ಕಲ್ಪನೆಯಲ್ಲಿ ಸರಸ್ವತಿಯ ರೂಪದಲ್ಲಿ
ವಾಸ್ತವದ ನಿನ್ನ ಅಗಲಿಕೆಗಿಂತ, ಕಲ್ಪನೆಯ ನಿನ್ನ ಇರುವಿಕೆಯೇ ಸ್ಥಿರವಾಗಲಿ………….
–ವಿಷಾದದಿಂದ– ಮಲೆನಾಡಿಗ