ಬಿಟ್ಟನೆಂದರೂ ಬಿಡದಿ ಮಾಯೆ
ಎಲ್ಲೆಲ್ಲೂ ಅವಳದೇ ಛಾಯೆ
ಕಾಲಕಾಲಕ್ಕೂ ಬದಲಾಗುತ್ತಿದ್ದೆ ಋತುಪರ್ಣೆಯಂತೆ ನೀನು
ಜಡಭರತನಂತೆ ಎಲ್ಲವನು ಸಹಿಸಿದೆ ನಾನು.
ಕಾಳಿದಾಸನಂತೆ ನಿನ್ನ ವರ್ಣಿಸಲಾರೆ
ಜಕ್ಕಣ್ಣನಂತೆ ನಿನ್ನ ರೂಪಿಸಲಾರೆ
ಕಡೆಗಲ್ಲಿನಂತಿದ್ದ ನನ್ನ ಬಾಳನ್ನು ಬಣ್ಣಿಸಿ, ರೂಪಿಸಿದೆ
ಸಾಧನೆಯ ಶಿಖರ ತುದಿಯ ಮೇಲೆ ನಾ ನಿಲ್ಲುವಂತೆ ಮಾಡಿದೆ
ಆದರೆ ನನ್ನ ಬಿಟ್ಟು ದೂರ ಏಕೆ ಹೋದೆ
ಮಿಂಚಿನಂತೆ ನನ್ನ ಬಾಳಲ್ಲಿ ಸಂಚರಿಸಿ, ಸಂಚಲನವನ್ನು ಮಾಡಿದೆ
ಈಗ ಸದ್ದಿಲ್ಲದಂತೆ ಕಣ್ಮರೆಯಾಗಿ ಹೋದೆ
ನನ್ನ ಅಪರಾಧವಾದರೂ ಏನೆಂದು ಕೇಳುವ ಮೊದಲೇ ನನ್ನಿಂದ ದೂರದೆ
ಏಕೆ ಗೆಳತಿ ನನಗೆ ಈ ರೀತಿ ಮಾಡಿದೆ.
ನಿನ್ನ ಜೊತೆ ಕಳೆದ ಆ ಮಧುರ ಕ್ಷಣಗಳು
ಅಳಿಯದಂತೆ ಉಳಿಸಿದೆ ಇನ್ನೂ ನನ್ನನು.
ಅಳಿದುಳಿದ ನಿನ್ನ ನೆನಪುಗಳೇ ನನಗೆ
ಸ್ಫೂರ್ತಿಯಾಗಿದೆ ನನ್ನ ಎಲ್ಲಾ ಕೆಲಸಗಳಿಗೆ.