ಕನ್ನಡ ಹಬ್ಬಕ್ಕೆ ಹೊಸ ರೂಪದಲ್ಲಿ ‘ಪದ’ ತಂತ್ರಾಂಶ
ಆನ್ ಲೈನ್ ನಲ್ಲಿ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ. ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ.
ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ. ಈ ಸಂದರ್ಭದಲ್ಲಿ ಕನ್ನಡ ಟೈಪಿಸಲು ‘ಪದ’ ತಂತ್ರಾಂಶದ ಹೊಸ ಆವೃತ್ತಿ (Pada 4.0) ಲಿನಾಕ್ಸ್ ಆವೃತ್ತಿಯಲ್ಲಿ ಬಿಡುಗಡೆಯಾಗಿದೆ.

Read more at: http://kannada.oneindia.com/news/karnataka/rajyotsava-pada-kannada-software-is-now-available-in-linux-version-078855.html
**********
Exclusive : ಆಂಡ್ರಾಯ್ಡ್ ಮಾರುಕಟ್ಟೆಗೆ ‘ಪದ’ ಎಂಟ್ರಿ
ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಬರೆಯಲು ಸಾಧ್ಯವಿರುವ ‘ಪದ’ ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ವಿಂಡೋಸ್ ಅಥವಾ ಲಿನಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಉಚಿತವಾಗಿ ಡೌನ್ ಲೋಡ್ ಗೆ ಲಭ್ಯವಿದೆ. ಈಗ ಆಂಡ್ರಾಯ್ಡ್ ಮಾರುಕಟ್ಟೆಗೂ ಪದ ಲಗ್ಗೆ ಇಟ್ಟಿದೆ.