ಗೌಡರಿಗೆ ವರವಾಗಲಿರುವ ಶೆಟ್ಟರ್ ಬಣದ ರಾಜೀನಾಮೆ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಬಣದ ಸಾಮೂಹಿಕ ರಾಜೀನಾಮೆ ಪ್ರಸಂಗದ ಸಂಪೂರ್ಣ ಲಾಭ ಪಡೆಯಲು ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ತುದಿಗಾಲಲ್ಲಿ ನಿಂತಿದ್ದಾರೆ.
ಹೈಕಮಾಂಡ್ ಸಣ್ಣ ಒಪ್ಪಿಗೆ ನೀಡಿದರೆ ಸಾಕು ಭಿನ್ನಮತ ಶಾಸಕರು, ಸಚಿವರುಗಳಿಗೆ ಚುರುಕು ಮುಟ್ಟಿಸಲು ಸದಾನಂದ ಸಿದ್ಧತೆ ನಡೆಸಿದ್ದಾರೆ. ರಾಜೀನಾಮೆ ಪರ್ವ ಮುಂದುವರೆದು ಸಂಸದರೂ ಕೂಡಾ ರಾಜೀನಾಮೆ ನೀಡುವ ಮುನ್ಸೂಚನೆ ಸಿಕ್ಕರೂ ಸದಾ ಬೆಚ್ಚಿಬಿದ್ದಿಲ್ಲ.