ದ್ವಾಪರ: ಮಹಾಭಾರತಕ್ಕೊಂದು ವಾಸ್ತವದ ವಿಶ್ಲೇಷಣೆ
ಪುರಾಣ ಎಂದರೇನು? ಎಂಬುದಕ್ಕೆ “ಪುರೇ ನವ ಇತಿ ಪುರಾಣಃ” ಎಂಬ ಮಾತಿದೆ. ಪುರಾಣ ಎಂಬುದು ಹೊಸ ಹೊಸ ಭಾಷ್ಯದೊಂದಿಗೆ ಅಂದಿಗೂ ಇಂದಿಗೂ ಮೆಚ್ಚುವಂತೆ ಪ್ರಸ್ತುತಪಡಿಸುವುದು ಬಹುಮುಖ್ಯವಾಗುತ್ತದೆ.
ಇಲ್ಲದಿದ್ದರೆ, ‘ಪುರಾಣವಿತ್ಯೇವ ನಾ ಸಾಧು ಸರ್ವಂ’ ಎಂಬ ಪುರಾಣ ಹೇಳಿದ್ದೆಲ್ಲ ಸರಿ ಎಂದು ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬಿದ್ದರೆ ಬಾವಿಕಪ್ಪೆಗಳಂಥ ಮನಸ್ಥಿತಿ ಮುಂದುವರೆಯುತ್ತದೆ. ‘ದ್ವಾಪರ’ ಎಂಬ ಹೆಸರಿನಲ್ಲಿ ಮಹಾಭಾರತ ಕಾವ್ಯಕ್ಕೆ ಕಂನಾಡಿಗ ನಾರಾಯಣ ಅವರು ನೀಡಿರುವ ವಿಶ್ಲೇಷಣೆಯ ಬಗ್ಗೆ ನನ್ನ ಅನಿಸಿಕೆ ಇಲ್ಲಿದೆ…