ಅನುಷಾ ಮೂರ್ತಿ ಎಂಬ ಅಪ್ಪಟ ಕನಸುಗಾರ್ತಿ
ಪ್ರತಿದಿನ ಬೀಳುವ ಕನಸಿನಲ್ಲಿ ಸಿಗುವ ಕಲ್ಪನೆಗಳನ್ನು ಅಕ್ಷರ ರೂಪದಲ್ಲಿ ಇಳಿಸಿ ಕಥೆಯಾಗಿ ವಿಸ್ತರಿಸುವ ಸುಖಾನುಭವವೇ ಬೇರೆ. ಕನಸು ಕಲ್ಪನೆಗಳ ಲೋಕದಲ್ಲಿ ತೇಲುತ್ತಾ ತನ್ನದ ಆದ ಊಹಾ ಪ್ರಪಂಚದಲ್ಲಿ ಸಿಗುವ ಹೊಸ ಪಾತ್ರಗಳನ್ನು ಕಾದಂಬರಿ ರೂಪದಲ್ಲಿ ಆಕೆ ತಂದಾಗ ಇನ್ನೂ 6ನೇ ತರಗತಿ ಪರೀಕ್ಷೆ ಮುಗಿದಿರಲಿಲ್ಲ.
ಮೊದಲ ಕಾದಂಬರಿ ಬರೆದು ಮುಗಿಸಿ ಅದು ಪ್ರಕಟಗೊಂಡಾಗ ಅಕೆ 10ನೇ ತರಗತಿ ಓದುತ್ತಿದ್ದಳು. ‘ಮೆಡೂಸಾ’ ಎಂಬ ಕಾದಂಬರಿ ಮೂಲಕ ಅನುಷಾ ಎಂಬ ಬೆಂಗಳೂರಿನ ಹುಡುಗಿ ಅತ್ಯಂತ ಕಿರಿಯ ಇಂಗ್ಲೀಷ್ ಕಾದಂಬರಿಗಾರ್ತಿ ಎಂಬ ಪಟ್ಟಕ್ಕೇರಿಬಿಟ್ಟಳು.