ಎಬಿಸಿ ಒಡೆತನದ ಕಾಫಿ ಡೇ ಸಂಸ್ಥೆಯ ಒಡೆಯ ವಿ.ಜಿ ಸಿದ್ದಾರ್ಥ ಅವರು ಅವರು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 650 ಕೋಟಿ ರು. ಆದಾಯ ಪತ್ತೆಯಾಗಿದ್ದು ಗೊತ್ತಿರಬಹುದು. ಈ ಆದಾಯವನ್ನು ಯಾವೆಲ್ಲ ಸಂಸ್ಥೆ ಮೇಲೆ ಹೂಡಿಕೆ ಮಾಡಲಾಗಿತ್ತು ಎಂಬ ಪಟ್ಟಿ ಇಲ್ಲಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಸರಕಾರಿ ಜಮೀನನ್ನು ಸಿದ್ಧಾರ್ಥ ಒತ್ತುವರಿ ಮಾಡಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಸರಿಪಡಿಸಿ ಎಂದು ಜನಸಂಗ್ರಾಮ ಪರಿಷತ್ ಅಥವಾ ಸಮಾಜ ಪರಿವರ್ತನಾ ಸಮುದಾಯದ ಕಾರ್ಯಕರ್ತ ಎಸ್.ಆರ್.ಹಿರೇಮಠ ಆರೋಪಿಸುತ್ತಲೇ ಬಂದಿದ್ದಾರೆ.
ಈ ಬಗ್ಗೆ ಕಪ್ಪು ಹಣದ ವಿರುದ್ಧ ತನಿಖೆ ನಡೆಸುವ ವಿಶೇಷ ತನಿಖಾ ತಂಡ(ಎಸ್ ಐಟಿ)ಗೆ ದೂರು ನೀಡಿದ್ದರು. ಹಿರೇಮಠ ಅವರು ದೂರಿನಲ್ಲಿ ಉಲ್ಲೇಖಿಸಿದ್ದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿ 650 ಕೋಟಿ ರು ಗೂ ಅಧಿಕ ಬೇನಾಮಿ ಹೆಸರಿನ ಆಸ್ತಿ ಪತ್ತೆಯಾಗಿದೆ. ಮುಂದೇನಾಯ್ತು? ಎಸ್ ಐಟಿ ಅಧಿಕಾರಿಗಳಿಗೆ ಗೊತ್ತು. ದೂರು ದಾಖಲಾಗಿರುವ ಕಂಪನಿಗಳ ಪಟ್ಟಿ ಹಾಗೂ ಇನ್ನಷ್ಟು ವಿವರಗಳಿಗೆ ಮುಂದೆ ಓದಿ…