ವಾಸ್ತವ ಹಾಗೂ ಕಾಲ್ಪನಿಕ ಜಗತ್ತಿನ ಮಧ್ಯದ ಕೊಂಡಿಯಾದ ರಂಗಭೂಮಿ, ಕಲಾವಿದರ ಪ್ರತಿಭೆಯ ವಿಕಸನಕ್ಕೆ ಸೃಷ್ಟಿಯಾದ ಸುಂದರ ವೇದಿಕೆ. ನಾಟಕ ಕಲ್ಪನಾಲೋಕಕ್ಕೂ, ವಾಸ್ತವಿಕ ಜೀವನಕ್ಕೂ ನಡುವೆ ಹಾಯಬಲ್ಲ ಸುಂದರ ನೃತ್ಯ ಕಲೆ. ಇದು ನೃತ್ಯಕಲೆ ಏಕೆಂದರೆ ಮೂಲ ಸಂಸ್ಕೃತ ಪದದ ಆರ್ಥ ನೃತ್ಯಾಧಾರಿತ ಕಲೆ ಎಂಬುದಾಗಿದೆ.
ಕಲ್ಪನೆ ಮತ್ತು ವಾಸ್ತವತೆಯಲ್ಲಿ ವಿಹರಿಸಲು ಬೇಕಾದ ಸೇತುವೆಯ ನಿರ್ಮಾಣ ವಾಗಬೇಕಾಗಿರುವುದು ರಂಗಕರ್ಮಿಗಳಿಂದ, ರಂಗಕರ್ಮಿಗಳೆಂದರೆ ಕೇವಲ ರಂಗಸಜ್ಜಿಕೆ, ವಿನ್ಯಾಸ, ಸಂಯೋಜನೆಯ ಕಾರ್ಯನಿರತರು ಮಾತ್ರವಲ್ಲ, ರಂಗಭೂಮಿಗಾಗಿ ತನು ಮನ ಧನವನ್ನು ಸಮರ್ಪಿಸಲು ಸಿದ್ಧರಿರುವ ನಟ, ನಿರ್ದೇಶಕ ಇನ್ನಿತರ ವರ್ಗದವರೂ ಸೇರುತ್ತಾರೆ. ಇವರಿಂದ ಸೃಷ್ಟಿಸಲ್ಪಡುವ ನಾಟಕವೆಂಬ ಅದ್ಭುತ ಕಲೆಯ ಅಳಿವು-ಉಳಿವಿಗೆ ಅಗತ್ಯವಾಗಿಬೇಕಾದ್ದು ಒಂದು ರಂಗಮಂದಿರ, ಇನ್ನೊಂದು ಪ್ರೇಕ್ಷಕವರ್ಗ.
ಅಂತರ್ಜಾಲ(ವೆಬ್), ಸಾಮಾಜಿಕ ಜಾಲ ತಾಣಗಳ ಮೂಲಕ ನಾವು ನಾಟಕದ ಪ್ರಚಾರವಷ್ಟೇ ಅಲ್ಲದೇ ಇನ್ನೂ ಹೆಚ್ಚಿನದ್ದನ್ನು ಸಾಧಿಸಬಹುದೇ? ಅಂತರ್ಜಾಲವನ್ನು ನಾಟಕರಂಗ ಹೇಗೆ ಸಮರ್ಪಕವಾಗಿ ದುಡಿಸಿಕೊಳ್ಳಬಹುದೇ? ಈ ವಿಷಯದ ಬಗ್ಗೆ ಕೆಲವು ರಂಗಾಸಕ್ತರನ್ನು ಅದರಲ್ಲೂ ಐಟಿರಂಗ, ರಂಗಭೂಮಿದ ಪರಿಚಯಿರುವ ಆಪ್ತರನ್ನು ಕೇಳಿದಾಗ ಸಿಕ್ಕ ಮಾಹಿತಿ ಆಗಾಧವಾಗಿತ್ತು. ಅದರ ಸಾರಾಂಶ ಇಲ್ಲಿದೆ..