ಸತ್ಯಕಿ ಈ ಹೆಸರಿನಲ್ಲಿ ಫ್ರೆಂಡೊಬ್ಬರು ಎಫ್ ಬಿಯಲ್ಲಿ ಇದ್ದಾರೆ ಎಂಬುದಷ್ಟೇ ಗೊತ್ತಿತ್ತು. ಅವರ ಸಾಹಿತ್ಯ ಕೃಷಿ, ವೃತ್ತಿ ಬಗ್ಗೆ ಹೆಚ್ಚೇನು ತಿಳಿದಿರಲಿಲ್ಲ. ಹೀಗೆ ಆರೇಳು ತಿಂಗಳ ಹಿಂದೆ ಇನ್ ಬಾಕ್ಸ್ ಗೆ ಮೆಸೇಜ್ ಬಂತು, ಯುಗೇ ಯುಗೇ ಇಂಥಿಂಥ ಕಡೆ ಸಿಗುತ್ತೆ ಓದಿ, ನಿಮ್ಮ ಅನಿಸಿಕೆ ತಿಳಿಸಿ, ಪುಸ್ತಕದ ಜೊತೆಗೆ ಒಂದು ಸೆಲ್ಫಿ ತೆಗೆದು ಕಳಿಸಿ, ಕೊಲಾಜ್ ಮಾಡ್ತೀವಿ ಅಂತಾ ಇತ್ತು.
ಇದಾದ ಬಳಿಕ ನಾನು ಪುಸ್ತಕ ಖರೀದಿಸಿ ಓದುವ ಹೊತ್ತಿಗೆ ಅದಾಗಲೇ ಡಿಸೆಂಬರ್ ಆಗಿತ್ತು. ಒಂದೆರಡು ಕಥೆಗಳನ್ನು ಓದುತ್ತಿದ್ದಂತೆ ಇಷ್ಟವಾಗಿ ಮೆಸೇಜ್ ಮಾಡಿದೆ. ಪೂರ್ತಿ ಓದಿ ತಿಳಿಸಿ ಧನ್ಯವಾದಗಳು ಅಂತಾ ರಿಪ್ಲೇ. ಅಷ್ಟರಲ್ಲಿ ಯುಗೇ ಯುಗೇ ಕಥಾ ಸಂಕಲನಕ್ಕೆ ಹೊಸ ತಲೆಮಾರಿನ ಸಣ್ಣ ಕಥೆಗಾರ ಪುರಸ್ಕಾರ ಲಭಿಸಿದ್ದು ತಿಳಿದು ಖುಷಿಯಾಯಿತು. ನನ್ನ ಓದು ಮತ್ತೆ ಮುಂದುವರೆದು ಮುಕ್ತಾಯವಾಯಿತು.
ಇದು ಯುಗೇ ಯುಗೇ ಕಥಾ ಸಂಕಲನದ ಬಗ್ಗೆ ನನ್ನ ಅನಿಸಿಕೆ ಓದುವುದಕ್ಕೂ ಮುನ್ನ ಓದಬೇಕಾದ ಮುನ್ನುಡಿ
ಸತ್ಯಕಿ ಅಲಿಯಾಸ್ ವಿನೋದ್ ಕುಮಾರ್ ಅವರ ಯುಗೇ ಯುಗೇ ಕಥಾ ಸಂಕಲನ ಇಷ್ಟವಾಗಲು ಕಾರಣ ಕಥಾ ವಸ್ತುವಿನ ಆಯ್ಕೆ, ಆಯ್ಕೆಯಲ್ಲಿನ ವೈವಿಧ್ಯತೆ, ಸರಳ ನಿರೂಪಣೆ ಹಾಗೂ ಮೆಚ್ಚಬಲ್ಲ ಪರಿಸಮಾಪ್ತಿ.
ಕೆಲ ಕಥೆಗಳನ್ನು ಮುಗಿಸಿದ ರೀತಿ ನಿರೀಕ್ಷಿತವೆನಿಸಿದರೂ ಓದುಗನಾಗಿ ನನ್ನ ತಾಳ್ಮೆ ಪರೀಕ್ಷೆಯಂತೂ ಆಗಲಿಲ್ಲ. ಒಂದಲ್ಲ ಒಂದು ರೀತಿ ಈ ಕಥೆಗಳು, ಪಾತ್ರಗಳು ಅಥವಾ ಪರಿಸರ ನಿಮ್ಮ ನೆನಪನ್ನು ಕೆದಕಿ, ಕಾಡದೇ ಬಿಡದು. ಪ್ರೀತಿ ಪ್ರೇಮವೆಂಬ ಸಾರ್ವಕಾಲಿಕ ಯಶಸ್ವಿ ವಿಷಯವಲ್ಲದೆ, ಜೀವನ ಪ್ರೀತಿ, ಹೋರಾಟ ಈ ಎಲ್ಲಾ ಕಥೆಗಳ ಹಂದರವಾಗಿ ಲೈಫು ಹಿಂಗೇನೆ ಎಂದು ಬದುಕಿಗೆ ಕನ್ನಡಿ ಹಿಡಿಯುತ್ತದೆ. ಇನ್ನಷ್ಟು ನಾಳೆ ಬರೆಯುತ್ತೇನೆ