ಇರಾನ್ ದೇಶದ ಚಿತ್ರಕರ್ಮಿ ಜಾಫರ್ ಪನಾಹಿ, ಹೊಸ ಅಲೆ ಚಿತ್ರಗಳ ಹರಿಕಾರ ಎಂದೇ ಗುರುತಿಸಲ್ಪಡುತ್ತಾರೆ. ಪನಾಹಿ ಬಗ್ಗೆ ಕನ್ನಡದಲ್ಲಿ ನಾಟಕವೊಂದು ಸಿದ್ಧವಾಗುತ್ತಿದೆ. ಈ ನಾಟಕಕ್ಕಾಗಿ ಕನ್ನಡ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಿರ್ದೇಶಕರಿಬ್ಬರು ಕೈಜೋಡಿಸಿರುವುದು ವಿಶೇಷ.
‘ಮೈತ್ರಿ’ ಚಿತ್ರ ಖ್ಯಾತಿ ಗಿರಿರಾಜ್ ಬಿ.ಎಂ ಅವರು ಜಾಫರ್ ಪನಾಹಿ ಹಾಗೂ ಇರಾನ್ ಸ್ಥಿತಿ ಗತಿಗಳ ಬಗ್ಗೆ ಸ್ಥೂಲ ಚಿತ್ರಣ ನೀಡಬಲ್ಲ ನಾಟಕವನ್ನು ರಂಗಕ್ಕೆ ತರುತ್ತಿದ್ದಾರೆ. ಈ ನಾಟಕದ ಪ್ರಮುಖ ಪಾತ್ರಧಾರಿಯಾಗಿ ‘ಗೋಲಿಬಾರ್’ ಖ್ಯಾತಿಯ ನಿರ್ದೇಶಕ ಶಿವಮಣಿ ಕಾಣಿಸಿಕೊಳ್ಳುತ್ತಿದ್ದಾರೆ.
ಜೊಸೆಫ್ ಪನಾಹಿ ಅವರ ರೆಬೆಲ್ ಕ್ಯಾರೆಕ್ಟರ್ ನನಗಿಷ್ಟ. ಅವರು ಹೇಗೆ ತಮ್ಮ ದೇಶದ ವ್ಯವಸ್ಥೆ, ಕಟ್ಟುಪಾಡುಗಳ ವಿರುದ್ಧ ಸಿಡಿದೆದ್ದ ರೀತಿ ನಮ್ಮ ಕಣ್ತೆರೆಸುತ್ತೆ. ಗಿರಿರಾಜ್ ಜತೆ ನಾನು ಟೈಗರ್ ಗಲ್ಲಿ ಎಂಬ ಚಿತ್ರದಲ್ಲಿ ನಟಿಸಿದ್ದೆ. ಇಬ್ಬರು ಒಳ್ಳೆ ಸ್ನೇಹಿತರಾದೆವು, ಈ ನಾಟಕದ ಬಗ್ಗೆ ಹೇಳಿದರು. ಪಾತ್ರದ ಬಗ್ಗೆ ತಿಳಿಸಿದರು. ತಕ್ಷಣವೇ ಒಪ್ಪಿಕೊಂಡೆ. ಇನ್ನಷ್ಟು ಓದಿ