ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸಂಭವಿಸುವ ಈ ತೀರಾ ಸಹಜ ಪ್ರಕ್ರಿಯೆ ಗ್ರಹಣಕ್ಕೆ ವಿಜ್ಞಾನಿಗಳ ಪಾಲಿನ ಕಲ್ಲುಗುಂಡು ಚಂದ್ರನನ್ನು ‘ಬ್ಲೂ ಮೂನ್’, ‘ಬ್ಲಡ್ ಮೂನ್’ ‘ಸೂಪರ್ ಮೂನ್’ಎಂಬಿತ್ಯಾದಿ ಉಪಮೇಯದಿಂದ ಕರೆಯಲಾಗುತ್ತದೆ. ಇಂಥ ದೃಶ್ಯ ನೋಡಬೇಕಾದರೆ 104 ವರ್ಷಗಳ ತನಕ ಕಾಯಬೇಕು. 103 ನಿಮಿಷಗಳ ಈ ಖಗೋಳ ಕೌತುಕವನ್ನು ತಪ್ಪದೇ ವೀಕ್ಷಿಸಿ, ಆನಂದಿಸಿ ಎಂದು ವಿಜ್ಞಾನಿಗಳು ಕರೆ ನೀಡಿದ್ದಾರೆ. ಜುಲೈ 27 ರಂದು ಸಂಭವಿಸುವ ಚಂದ್ರಗ್ರಹಣ 21 ನೇ ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಸುಮಾರು ಮೂರು ಮುಕ್ಕಾಲು ತಾಸು ಚಂದ್ರ ಗ್ರಹಣಗ್ರಸ್ತವಾಗಲಿದ್ದಾನೆ.
ಜುಲೈ 27ರ ರಾತ್ರಿ 11:43 ರಿಂದ ಆರಂಭವಾಗಿ ನಂತರ ಜುಲೈ28 ರ ಬೆಳಗ್ಗಿನ ಜಾವ 3.47 ರವರೆಗೂ ಕಂಡುಬರುವ ಈ ಗ್ರಹಣವನ್ನು ನೋಡಲು ಅನೇಕ ಕಡೆ ವ್ಯವಸ್ಥೆ ಮಾಡಲಾಗಿದೆ. ರಾತ್ರಿ 1 ಗಂಟೆಯಿಂದ 2.43 ರವರೆಗೆ ಚಂದ್ರ ಸಂಪೂರ್ಣ ಮರೆಯಾಗಲಿದ್ದು, ಮತ್ತೆ ಇಂಥ ಖಗ್ರಾಸ ಚಂದ್ರಗ್ರಹಣ ನೋಡಲು 2036 ರವರೆಗೆ ಕಾಯಬೇಕು. ಬ್ಲಡ್ ಮೂನ್ ನೋಡಲು 2123 ತನಕ ಕಾಯಬೇಕು. 21ನೇ ಶತಮಾನದ ಅತಿ ದೀರ್ಘವಾದ ಗ್ರಹಣ ಇದಾಗಿದೆ. ಆಕಾಶದಲ್ಲಿ ಚಂದಿರ ಕಾಣದಿದ್ದರೆ, ಆನ್ ಲೈನ್ ನಲ್ಲಿ ಲೈವ್ ನೋಡಬಹುದು.
* Time and Date website : https://www.timeanddate.com/live/
* NASA website: https://www.nasa.gov/nasalive