ನಾಗರಿಕ ಸಮಾಜದ ಜವಾಬ್ದಾರಿಯುತ ಮತದಾರನೊಬ್ಬನಿಗೆ ತನ್ನ ಕ್ಷೇತ್ರದ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸುವ ಹಕ್ಕನ್ನು ಮಾತ್ರ ನೀಡಲು ಸರ್ಕಾರವಾಗಲಿ, ಆಯೋಗವಾಗಲಿ ಹಿಂದೇಟು ಹಾಕುತ್ತಾ ಬಂದಿದೆ.
ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ) ಗಳಲ್ಲಿ ಅಭ್ಯರ್ಥಿ ತಿರಸ್ಕರಿಸಲು ಒಂದು ಪ್ರತ್ಯೇಕ ಬಟನ್ ವಿನ್ಯಾಸಗೊಳಿಸುವಂತೆ ಚುನಾವಣಾ ಆಯೋಗಕ್ಕೆ 2013ರಲ್ಲೇ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ನಂತರ ನಡೆದ ಲೋಕಸಭೆ, ವಿಧಾನಸಭೆ ಚುನಾವಣೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಬಂದರೂ ಅನುಷ್ಠಾನಗೊಳಿಸಲು ಯಾರು ಮನಸ್ಸು ಮಾಡಲಿಲ್ಲ.
ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು. ಆದರೆ, ಈ ಬಗ್ಗೆ ಪ್ರಶ್ನಿಸಿದರೆ ಸಿಕ್ಕ ಉತ್ತರ ಆಶಾದಾಯಕವಾಗೇನು ಇರಲಿಲ್ಲ. ಇವಿಎಂ ಬಳಕೆಯೇ ಎಲ್ಲೆಡೆ ಇರುವುದರಿಂದ ಬ್ಯಾಲೆಟ್ ಪೇಪರ್ ಜೊತೆಗೆ 49 ಒ ಅರ್ಜಿ ತುಂಬಲು ಆಸ್ಪದ ಸಿಗಲಿಲ್ಲ. ನೋಟಾ ತನ್ನ ಪವರ್ ಕಳೆದುಕೊಂಡಿದ್ದು, 49 ಒ ಎಂಬ ಬ್ರಹ್ಮಾಸ್ತ್ರ ಪ್ರಯೋಗಿಸಲು ಆಗದ ಮತದಾರನ ನಿಸ್ಸಹಾಯ ಪರಿಸ್ಥಿತಿ ಮೇಲೆ ಜನಪ್ರತಿನಿಧಿಗಳ ವಿಜಯ ಪ್ರಜಾಪ್ರಭುತ್ವದ ಕುಹಕ ಎನ್ನಬಹುದು.
ಇವಿಎಂನಲ್ಲಿ 49 ಒ ಬಟನ್ ಆಯ್ಕೆ ನೀಡುವಂತೆ ಚುನಾವಣಾ ಆಯೋಗ ಮಾಡಿದ್ದ ಮನವಿಯನ್ನು ಅಂದಿನ ಯುಪಿಎ ಹಾಗೂ ಇಂದಿನ ಎನ್ಡಿಎ ಸರ್ಕಾರ ತಿರಸ್ಕರಿಸಿವೆ. 1961ರ ಚುನಾವಣಾ ಪ್ರಕ್ರಿಯೆ ಕಾಯ್ದೆಯ 22ನೇ ನಿಯಮ ಹಾಗೂ 49ಬಿ ನಿಯಮಕ್ಕೆ ಸರ್ಕಾರಗಳು ತಿದ್ದುಪಡಿ ತಂದರೆ ಮಾತ್ರ 49 ಒ ಗೆ ಬೆಲೆ ಸಿಗಲಿದೆ. ಇಲ್ಲದಿದ್ದರೆ, ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಸ್ಥಿತಿ ಮುಂದುವರೆಯಲಿದೆ. ಹೆಚ್ಚಿನ ಮಾಹಿತಿ ಇಲ್ಲಿ ಓದಿ