ಒನ್ಇಂಡಿಯಾ ಕನ್ನಡಕ್ಕಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ, ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರವಾಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು, ಅತಿವೃಷ್ಟಿ ಸಂದರ್ಭವನ್ನು ನಮ್ಮ ಅಗತ್ಯಕ್ಕೆ ಯಾವ ರೀತಿ ಬಳಸಿಕೊಳ್ಳಬಹುದು, ನದಿ ಜೋಡಣೆ ಸಾಧ್ಯತೆ, ಕೊಳವೆ ಬಾವಿ…ನಾನಾ ವಿಷಯಗಳ ಬಗ್ಗೆ ಮಾತನಾಡಿದರು. ಸಂದರ್ಶನದ ಕೊನೆಯ ಭಾಗ ಇಲ್ಲಿದೆ..
“ಕೃಷಿ ಭೂಮಿಯನ್ನು ಮೈದಾನ ಮಾಡಿ ಬಿಟ್ಟಿದ್ದೇವೆ. ಸಾವಿರಾರು ಎಕರೆ ಭೂಮಿ ಇದ್ದರೂ ಬೆರೆಳೆಣಿಕೆಯಷ್ಟು ಮರಗಳನ್ನು ಮಾತ್ರ ಅನೇಕ ಕಡೆ ಕಾಣುವಂಥ ಪರಿಸ್ಥಿತಿಯಿದೆ. ಕೃಷ್ಣಾ ಪಾತ್ರದಲ್ಲಿ ಕೃಷಿ ಪದ್ಧತಿ ಬದಲಾವಣೆ ಅಗತ್ಯ, ಕಬ್ಬು ಮಾತ್ರ ನಂಬಿಕೊಂಡಿದ್ದರೆ ಅಪಾಯ ಖಂಡಿತ ಎಂಬ ಎಚ್ಚರಿಕೆ ನೀಡಿದ್ದಾರೆ”
ಕೊಳವೆ ಬಾವಿ ರೀಚಾರ್ಜ್, ನದಿ ಸಂರಕ್ಷಣೆ, ನದಿ ನೀರು ಜೋಡಣೆ ಸಾಧ್ಯತೆ, ಜಿಂದಾಲ್ ಸ್ಟೀಲ್ ಸಂಸ್ಥೆ, ಸತ್ಯಸಾಯಿ ಸಂಸ್ಥೆ ಕೈಗೊಂಡ ಯೋಜನೆ, ಸಮುದ್ರ ನೀರಿನ ಪುನರ್ಬಳಕೆ, ಮಳೆಕೊಯ್ಲು ಕಡ್ಡಾಯ, ಪಠ್ಯಕ್ರಮದಲ್ಲಿ ನೀರಿನ ಬಗ್ಗೆ ಹೀಗೆ, ಕಣ್ಮುಂದೆ ಅನೇಕ ಮಾರ್ಗೋಪಾಯಗಳಿವೆ, ಎಲ್ಲವನ್ನು ಸೂಕ್ತವಾಗಿ ಬಳಸಿಕೊಂಡು ಮುನ್ನಡೆದರೆ ಯಾವುದೇ ರೀತಿ ಸಮಸ್ಯೆಗಳಿರುವುದಿಲ್ಲ.