ಜಲತಜ್ಞ ಡಾ. ದೇವರಾಜ್ ರೆಡ್ಡಿರಿಂದ ಪ್ರವಾಹದ ನೈಜ ಕಾರಣ ಬಹಿರಂಗ

ಒನ್ಇಂಡಿಯಾ ಕನ್ನಡಕ್ಕಾಗಿ ನೀಡಿದ ವಿಶೇಷ ಸಂದರ್ಶನದಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿನ ಪ್ರವಾಹ ಪರಿಸ್ಥಿತಿ, ಸರ್ಕಾರ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರವಾಹ ಪರಿಸ್ಥಿತಿಯಲ್ಲಿ ಸಾರ್ವಜನಿಕರು ಏನು ಮಾಡಬೇಕು, ಅತಿವೃಷ್ಟಿ ಸಂದರ್ಭವನ್ನು ನಮ್ಮ ಅಗತ್ಯಕ್ಕೆ ಯಾವ ರೀತಿ ಬಳಸಿಕೊಳ್ಳಬಹುದು, ನದಿ ಜೋಡಣೆ ಸಾಧ್ಯತೆ, ಕೊಳವೆ ಬಾವಿ…ನಾನಾ ವಿಷಯಗಳ ಬಗ್ಗೆ ಮಾತನಾಡಿದರು. ಸಂದರ್ಶನದ ಮೊದಲ ಭಾಗ ಇಲ್ಲಿದೆ..

“ಮುಂಗಾರು ಮಳೆ ತಿಂಗಳಿಗೂ ಅಧಿಕ ಕಾಲ ವಿಳಂಬವಾದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು, ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪದ ಬಗ್ಗೆ ಚಿಂತನೆ, ಚರ್ಚೆ ಸಾಕಷ್ಟು ನಡೆದರೂ ಪರಿಸರ ಉಳಿಸುವ ಕಾರ್ಯದಲ್ಲಿ ಸರ್ಕಾರದ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ” ಎಂದು ಮಳೆಕೊಯ್ಲು, ಜಲ ಭೂಗರ್ಭಶಾಸ್ತ್ರಜ್ಞ ಡಾ. ದೇವರಾಜ ರೆಡ್ಡಿ ಅವರು ನೊಂದು ನುಡಿದರು.

ಮಣ್ಣಿನ ಸವಕಳಿ(soil erosion), ಮಣ್ಣಿನ ಗುಣಮಟ್ಟ ಸಮಸ್ಯೆಯೇ ಕಾರಣ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವ ತಾಣಗಳಾದ ಕೆರೆ, ಹಳ್ಳಗಳು ಇಲ್ಲದ ಕಾರಣ, ಸಮತಟ್ಟು ಪ್ರದೇಶದಲ್ಲಿ ನೀರು ವೇಗವಾಗಿ ಹರಿಯುವುದರ ಜೊತೆಗೆ ಮಣ್ಣಿನ ಹಲವು ಪದರವನ್ನು ನಾಶಪಡಿಸಿಕೊಂಡು ಸಾಗುತ್ತದೆ. ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ತೀವ್ರತೆಗೆ ಇದೇ ಕಾರಣ

ಸಂದರ್ಶನದ ಪೂರ್ಣಪಾಠ ಇಲ್ಲಿ ಓದಿ

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

Leave a Reply

Your email address will not be published. Required fields are marked *