ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್ ಸಿ ಕ್ಯೂ ಲಸಿಕೆ ಹಿಂದೆ ಯಾಕೆ ಬಿದ್ದಿದ್ದಾರೆ ಎಂಬ ಚರ್ಚೆ ವೆಬ್ ತಾಣಗಳಿಂದಾಚೆಗೂ ನಡೆದಿದೆ. ಮುಂದುವರೆದ ರಾಷ್ಟ್ರ ಅಮೆರಿಕ ಏಕೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಭಾರತದ ನೆರವು ಕೋರುತ್ತಿದೆ ಎಂಬ ಪ್ರಶ್ನೆಗಳು ಅನೇಕರ ಕುತೂಹಲ ಕೆರಳಿಸಿವೆ. ಉತ್ತರ ಸ್ಪಷ್ಟವಾಗಿದೆ. ನಾವು ಇಲ್ಲಿಂದ ಬ್ರೈನ್ ಡ್ರೈನ್ ಮಾಡಿ ಹೊರಗುತ್ತಿಗೆಯನ್ನು ಐಟಿ-ಬಿಟಿ ಕ್ಷೇತ್ರದ ಆಧಾರ ವಾಗಿಸಿದಂತೆ, ಅಮೆರಿಕ ಕೂಡಾ ಸಂಶೋಧನೆ, ಉನ್ನತ ವೈದ್ಯಕೀಯ ಅಧ್ಯಯನಕ್ಕೆ ಕೌಶಲ್ಯವುಳ್ಳ ಭಾರತೀಯರನ್ನು ಬಳಸಿಕೊಳ್ಳುತ್ತಿದೆ.
ಮಿಕ್ಕಂತೆ ಮಲೇರಿಯಾ ಡ್ರಗ್ ವಿಷಯಕ್ಕೆ ಬಂದರೆ, ವಿಶ್ವದಲ್ಲಿ ಅತಿ ಹೆಚ್ಚು ಈ HCQ ಡ್ರಗ್ ಉತ್ಪಾದನೆ ಮಾಡುವ ಭಾರತದ ಮೇಲೆ ಮಿಕ್ಕ ದೇಶಗಳು ಅವಲಂಬಿಸಬೇಕಾಗುತ್ತದೆ. ಮಲೇರಿಯಾ ರೋಗಿಗಳಿಗೆ ಪ್ಲೇಕ್ವೆನಿಲ್ ಹೆಸರಿನಲ್ಲಿ ನೀಡಲಾಗುವ ಹೈಡ್ರೋಕ್ಸಿಕ್ಲೋರೊಕ್ವೆನ್(HCQ) ಎಂಬ Anti-Malaria ಔಷಧದ ಬಗ್ಗೆ ಟ್ರಂಪ್ ಅವರು ಮಾರ್ಚ್ ತಿಂಗಳಲ್ಲಿ ತಮ್ಮ ಟ್ವೀಟ್ ನಲ್ಲಿ ಉಲ್ಲೇಖಿಸಿದ್ದರು.
HCQ ಹಾಗೂ ಅಜಿಥ್ರೋಮೈಸಿನ್ ಬಳಕೆಯಿಂದ ವೈದ್ಯಕೀಯ ಲೋಕದಲ್ಲಿ ಭಾರಿ ಬದಲಾವಣೆ ಸಾಧ್ಯ ಎಂದಿದ್ದರು. ಆದರೆ, ಇದಾದ ಬಳಿಕ ಭಾರತ ಈ ಡ್ರಗ್ ರಫ್ತು ಮಾಡುವುದನ್ನು ಬಂದ್ ಮಾಡಿತ್
Read more at: https://kannada.oneindia.com/features/what-is-hydroxychloroquine-trump-touts-hcq-drug-cure-for-coronavirus-189051.html