ಕೊರೊನಾವೈರಸ್ ಸೋಂಕು, ಹೋಂ ಕ್ವಾರಂಟೈನ್ ಇರುವವರು ನಡೆದುಕೊಳ್ಳಬೇಕಾದ ರೀತಿ ನೀತಿ, ಲಾಕ್ಡೌನ್ ನಿಯಮದ ಬಗ್ಗೆ ಫೇಸ್ಬುಕ್, ವಾಟ್ಸಾಪ್, ಟೆಲಿಗ್ರಾಂ, ಇನ್ಸ್ಟಾಗ್ರಾಂ, ಟಿಕ್ ಟಾಕ್ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗ ಮತ್ತೊಂದು ಆಂಡ್ರಾಯ್ಡ್ ಆಪ್ ನಿಮ್ಮ ಮುಂದಿಡಲಾಗಿದೆ.
ಈ ಮೂಲಕ ಸೋಂಕಿತ ವ್ಯಕ್ತಿಗಳನ್ನು ಟ್ರ್ಯಾಕ್ ಮಾಡಿ, ಆರೊಗ್ಯವಂತರಿಗೆ ರೋಗ ಹರಡದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಈ ಆಪ್ ಮೂಲಕ ಕೊವಿಡ್19 ಪಾಸಿಟಿವ್ ರೋಗಿಗಳ ಚಲನವಲನಗಳನ್ನು ರಿಯಲ್ ಟೈಮಲ್ಲಿ ಟ್ರ್ಯಾಕ್ ಮಾಡಬಹುದು. ಕೊರೊನಾ ಸೋಂಕಿತರು, ಹೋಂ ಕ್ವಾರಂಟೈನ್ ಆಗಿರುವವರು ಎಲ್ಲೆಲ್ಲಿದ್ದಾರೆ ಎಂದು ಗುರುತಿಸಬಹುದು.
Read more at: https://kannada.oneindia.com/features/coronavirus-tracking-app-how-to-install-aarogya-setu-app-188662.html