ಕೊರೊನಾ ವಿರುದ್ಧ ಹೋರಾಡಲು ವಿಶ್ವದ 18ಕ್ಕೂ ಅಧಿಕ ರಾಷ್ಟ್ರಗಳು ಒಗ್ಗೂಡಿವೆ. ಈ ಒಕ್ಕೂಟದ ನೇತೃತ್ವವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ವಹಿಸಿಕೊಂಡಿದ್ದಾರೆ ಎಂಬ ಟ್ವಿಟ್ಟರ್ ಸಂದೇಶ ಹಂಚಿಕೆಯಾಗುತ್ತಿದೆ.
ಆದರೆ, ಇದೊಂದು ಸುಳ್ಳು ಸುದ್ದಿ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಯುಎಸ್, ಯುಕೆ ಸೇರಿದಂತೆ ಅಂತಾರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚನೆಯಾಗಿದ್ದು, ಇದಕ್ಕೆ ಮೋದಿ ನಾಯಕರಾಗಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿದೆ. ಜೊತೆಗೆ ನರೇಂದ್ರ ಮೋದಿ.ಇನ್ ವೆಬ್ ತಾಣದಲ್ಲಿರುವ ಲೇಖನವೊಂದನ್ನು ಉಲ್ಲೇಖಿಸಲಾಗಿದೆ.
ಅಂತಾರಾಷ್ಟ್ರೀಯ ಟಾಸ್ಕ್ ಫೋರ್ಸ್ ರಚನೆ, ಮೋದಿ ಅವರ ನಾಯಕತ್ವದ ಬಗ್ಗೆ ಚರ್ಚೆಯಾಗಿಲ್ಲ, ಅಂಥ ಟಾಸ್ಕ್ ಫೋರ್ಸ್ ಅಸ್ತಿತ್ವದಲ್ಲಿಲ್ಲ. ಈ ಬಗ್ಗೆ ಬಂದಿರುವ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ.