ಕೊರೊನಾ ಕರಿನೆರಳು ”ಕೊರೊನಾ” ಮೇಲೆ ಬಿದ್ದಿದೆ. ಸರ್ಕಾರದ ಅದೇಶಕ್ಕೆ ಮಣಿದು ಜನಪ್ರಿಯ ಬಿಯರ್ ಕೊರೊನಾ ಉತ್ಪಾದನೆಯನ್ನು ಗ್ರುಪೊ ಮೊಡೆಲೋ ಸಂಸ್ಥೆ ಬಂದ್ ಮಾಡಿದೆ.
ಕೊರೊನಾ ಉತ್ಪಾದನೆ, ಮಾರ್ಕೆಟಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮೆಕ್ಸಿಕೋ ಸರ್ಕಾರ ನೀಡಿರುವ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ, ಬಿಯರ್ ಅಗತ್ಯ ವಸ್ತುಗಳ ಉತ್ಪಾದನೆಯ ವ್ಯಾಪಾರದ ಪಟ್ಟಿಯಲ್ಲಿಲ್ಲ ಎಂದು ಸಂಸ್ಥೆಯ ಮಾಲೀಕ ಅನ್ ಹುಸರ್ ಬುಶ್ ಇನ್ಬೆವ್ ಪ್ರತಿಕ್ರಿಯಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾ ಬಿಯರ್ ಮಾರಾಟ ಶೇ 8.9ರಷ್ಟು ಏರಿಕೆ ಕಂಡಿದೆ. ವರ್ಷದ ಆರಂಭದ ಮೊದಲ ಮೂರು ತಿಂಗಳ ಎಣಿಕೆಯಲ್ಲಿ ಮೊಡೆಲೋ ಹಾಗೂ ಕೊರೊನಾ ಬಿಯರ್ ಗಳು ಹೆಚ್ಚು ಬಿಕರಿಯಾಗಿವೆ.
ಅಮೆರಿಕದಲ್ಲಿ ಬಿಯರ್ ಹಾಗೂ ಇತರೆ ಆಲ್ಕೋಹಾಲ್ ಉತ್ಪನ್ನಗಳ ಮಾರಾಟವು ಈ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಾಗಿದೆ. ನೀಲ್ಸನ್ ವರದಿಯಂತೆ ಬಿಯರ್ ಮಾರಾಟ ಶೇ 34ರಷ್ಟು ಏರಿಕೆಯಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
Read more at: https://kannada.oneindia.com/news/business/mexican-corona-beer-production-suspended-amid-of-covid19-pandemic-188835.html