ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲ ತಾಣ, ಚಾಟಿಂಗ್ ಆಪ್ ಮೂಲಕ ಹಬ್ಬುತ್ತಿರುವ ಸುಳ್ಸುದ್ದಿ ವಿರುದ್ಧ ಸರ್ಕಾರ ಅಗತ್ಯ ಕ್ರಮಗಳನ್ನು ಜರುಗಿಸುತ್ತಿದೆ. ವಾಟ್ಸಾಪ್ ಕೂಡಾ ಫಾರ್ವರ್ಡ್ ಸಂದೇಶಗಳನ್ನೆಲ್ಲ ಬೇಕಾಬಿಟ್ಟಿ ಹಂಚಿಕೆ ಮಾಡುವುದಕ್ಕೆ ಕಡಿವಾಣ ಹಾಕುತ್ತಿದೆ. ಆದರೆ, ಈ ನಡುವೆ ವಾಟ್ಸಾಪ್ ನಲ್ಲಿ ಸಂದೇಶ ಓದಿದ್ದಕ್ಕೆ ಬರುವ ಟಿಕ್ ಮಾರ್ಕ್ ಕುರಿತಂತೆ ಸುಳ್ಳು ಸುದ್ದಿಯೊಂದು ಹಬ್ಬುತ್ತಿದೆ.
ಸತ್ಯಾಸತ್ಯತೆ: ಸರ್ಕಾರ ಈ ರೀತಿ ಯಾವುದೇ ಸಾಮಾಜಿಕ ಜಾಲ ತಾಣದ ಮೇಲೆ ನಿಗಾವಹಿಸಿಲ್ಲ. ವೈಯಕ್ತಿಕ ಡೇಟಾ ಪರೀಕ್ಷಿಸುತ್ತಿಲ್ಲ. ಈ ರೀತಿ ನೀಲಿ, ಕೆಂಪು, ಎರಡು ಮೂರು ಟಿಕ್ಸ್ ಪರಿಚಯಿಸುವಂತೆ ವಾಟ್ಸಾಪ್ ಬಳಿ ಸರ್ಕಾರ ಕೇಳಿಕೊಂಡಿಲ್ಲ.
ಕೊರೊನಾ ಕುರಿತಂತೆ ಮಾಹಿತಿ ನೀಡುತ್ತಾ ಬಂದಿರುವ ಸರ್ಕಾರವು, fact check ಅಪ್ಡೇಟ್ಸ್ ಗಳನ್ನು ಟ್ವಿಟ್ಟರ್, ಫೇಸ್ಬುಕ್ ನಲ್ಲಿ ನೀಡುತ್ತಿದೆ.
Read more at: https://kannada.oneindia.com/news/business/fact-check-govt-order-about-whatsapp-message-tick-marks-189008.html