ಏಪ್ರಿಲ್ ತಿಂಗಳ ಈ ಚಂದ್ರ ಹೆಚ್ಚು ಪ್ರಕಾಶಮಾನವಾಗಿ, ದೊಡ್ಡ ಗಾತ್ರದಲ್ಲಿ ಕಾಣಿಸಲಿದ್ದಾನೆ ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.
ಏಪ್ರಿಲ್ 8 ರ ಬೆಳಗ್ಗೆ 8 ಗಂಟೆಗೆ ಸೂಪರ್ ಮೂನ್ ಸ್ಪಷ್ಟವಾಗಿ ಗೋಚರಿಸಲಿದೆ. ಸೂರ್ಯನ ಬೆಳಕು ಇರುವುದರಿಂದ ವೀಕ್ಷಣೆಗೆ ತೊಡಕಾಗುವ ಸಾಧ್ಯತೆಯಿದೆ. ಏಪ್ರಿಲ್ 7 ರ ರಾತ್ರಿ ಉತ್ತರ ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ಕೂಡ ಸೂಪರ್ ಮೂನ್ ಗೋಚರಿಸಲಿದೆ. ಎಲ್ಲೆಲ್ಲಿ ಚಂದ್ರ ಗ್ರಹಣ ಗೋಚರಿಸುತ್ತದೋ ಅಲ್ಲೆಲ್ಲ ಜನರು ಬರಿಗಣ್ಣಿನಿಂದ ಚಂದ್ರ ಗ್ರಹಣವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ವೀಕ್ಷಿಸಬಹುದು. ಸ್ಪಷ್ಟವಾಗಿ ಬರಿಗಣ್ಣಿಗೆ ಗೋಚರಿಸಿಲ್ಲ ಎಂದು ಚಿಂತಿಸಬೇಡಿ. ನಾಸಾ ಒದಗಿಸುವ ಲೈವ್ ಸ್ಟ್ರೀಮಿಂಗ್ ಮೂಲಕ ಈ ಅದ್ಭುತವನ್ನು ವೀಕ್ಷಿಸಿ ಆನಂದಿಸಬಹುದು.
ಉತ್ತರ ಅಮೆರಿಕದ ಪೂರ್ವಭಾಗದಲ್ಲಿ ಕಾಣಿಸಿಕೊಳ್ಳುವ ಪಿಂಕ್ ಹೂ (Phlox subulata) ನಿಂದ ಚಂದ್ರನಿಗೆ ಈ ಹೆಸರು ಬಂದಿದೆ. ಚಂದ್ರನ ಬಣ್ಣವೇನು ಬದಲಾವಣೆಯಾಗಿ ಈ ರೀತಿ ಕಾಣಿಸುವುದಿಲ್ಲ. ಪ್ರಾದೇಶಿಕ ಹಾಗೂ ವಿವಿಧ ಋತುಗಳ ಆಧಾರದ ಮೇಲೆ ಬೇರೆ ಬೇರೆ ಹೆಸರಿನಲ್ಲಿ ದೊಡ್ಡ ಗಾತ್ರದ ಚಂದ್ರನನ್ನು ಕರೆಯುವುದು ರೂಢಿಯಲ್ಲಿದೆ. Sprouting Grass Moon, the Egg Moon, and the Fish Moon ಎಂಬ ಹೆಸರುಗಳು ಚಂದಿರನಿಗೆ ಕರೆಯಲಾಗಿದೆ. ಚಂದ್ರನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಾಸಾದ ವಿಶೇಷ ಪುಟ ನೋಡಬಹುದು
Read more at: https://kannada.oneindia.com/features/super-pink-moon-2020-date-timings-and-how-to-watch-in-india-188938.html