ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಲಾಕ್ಡೌನ್ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ತೆರಿಗೆದಾರರಿಗೆ ನಿರಾಳವಾಗುವ ಸುದ್ದಿ ಸಿಕ್ಕಿದೆ. ಸರ್ಕಾರದಿಂದ ಸಿಗುವ ಪರಿಹಾರ ಕ್ರಮಗಳ ಪ್ರಯೋಜನಗಳನ್ನು ತೆರಿಗೆದಾರರು ಪಡೆಯುವುದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ದಿನಾಂಕವನ್ನು ಪರಿಷ್ಕರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.
ಈ ಮೂಲಕ ಭಾರತ ಸರ್ಕಾರವು ನೀಡಿರುವ ವಿವಿಧ ಟೈಮ್ಲೈನ್ ವಿಸ್ತರಣೆಗಳ ಸಂಪೂರ್ಣ ಪ್ರಯೋಜನಗಳನ್ನು ತೆರಿಗೆದಾರರಿಗೆ ಅನುಕೂಲವಾಗಲಿದೆ. 2019-20ನೇ ಹಣಕಾಸು ವರ್ಷಕ್ಕೆ (ಮೌಲ್ಯಮಾಪನ ವರ್ಷ 2020-21) ರಿಟರ್ನ್ ಫಾರ್ಮ್ಗಳನ್ನು ಸಿಬಿಡಿಟಿ ಪರಿಷ್ಕರಿಸುತ್ತಿದೆ. ಏಪ್ರಿಲ್ ತಿಂಗಳಾಂತ್ಯಕ್ಕೆ ಅಧಿಕೃತ ನೋಟಿಫಿಕೇಷನ್ ಸಿಗಲಿದೆ ಎಂದು ವಿತ್ತ ಸಚಿವಾಲಯವು ಹೇಳಿದೆ.
2020ರ ಮಾರ್ಚ್ 30ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷಕ್ಕೆ ಅನುಗುಣವಾಗಿ ಏಪ್ರಿಲ್ 1 ರಿಂದ 2020 ರ ಜೂನ್ 30 ರವರೆಗೆ ನಡೆಸಿದ ಆರ್ಥಿಕ ವಹಿವಾಟುಗಳು ತೆರಿಗೆ ಕ್ಲೇಮ್ ಗೆ ಅರ್ಹವಾಗಿವೆ.