ದೇಶದ ಐಟಿ ರಾಜಧಾನಿ ಬೆಂಗಳೂರು ನಗರದಲ್ಲಿ ಕೊರೊನಾವೈರಸ್ ದೆಸೆಯಿಂದ ಉದ್ಯೋಗ ಕಡಿತ ಆರಂಭವಾಗಿದೆಯೇ? ಯಾವುದೇ ಕಾರಣವಿಲ್ಲದೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಟೆಕ್ಕಿಗಳಿಗೆ ಪಿಂಕ್ ಸ್ಲಿಪ್ ನೀಡಲಾಗುತ್ತಿದೆಯೇ? ಈ ರೀತಿ ಸುದ್ದಿ ವರ್ಕ್ ಫ್ರಂ ಹೋಮ್ ಮಾಡುತ್ತಿರುವ ಹಲವು ಟೆಕ್ಕಿಗಳಿಗೆ ಆಘಾತ ಮೂಡಿಸಿದೆ. ಎಕೋಸ್ಪೇಸ್ ನಲ್ಲಿರುವ ಪ್ರತಿಷ್ಠಿತ ಕಂಪನಿಯೊಂದರ ಮಹಿಳಾ ಸಾಫ್ಟ್ ವೇರ್ ಉದ್ಯೋಗಿ ವಜಾಗೊಂಡ ಬಳಿಕ ಬರೆದ ಪತ್ರ ಈಗ ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದೆ.
ಬಹುಮುಖ್ಯವಾಗಿ ಐಟಿ-ಬಿಟಿ ಉದ್ಯೋಗಿಗಳ ಕಷ್ಟ ನಷ್ಟಕ್ಕೆ ಕಾರ್ಮಿಕ ಇಲಾಖೆ ಬಳಿ ಉತ್ತರವಿಲ್ಲವೇ? ಐಟಿ ಕೂಲಿಗಳು ಎಂದೇ ತಮ್ಮನ್ನು ತಾವೇ ಗೇಲಿ ಮಾಡಿಕೊಳ್ಳುವ ಟೆಕ್ಕಿಗಳನ್ನು “ಕಾರ್ಮಿಕ” ಎಂದು ಇಲಾಖೆ ಪರಿಗಣಿಸುವುದಿಲ್ಲವೇ? ಎಂಬ ಪ್ರಶ್ನೆ ಎದ್ದಿದೆ.
ಇದೆಲ್ಲದರ ನಡುವೆ ಕಾಡುಗೋಡಿ ನಿವಾಸಿ ದೀಪಾ ವೆಂಕಟೇಶ್ ರೆಡ್ಡಿ ಎಂಬುವರು ತಾವು ಕಾರ್ಯ ನಿರ್ವಹಿಸುತ್ತಿದ್ದ ಬಹುರಾಷ್ಟ್ರೀಯ ಕಂಪನಿಯಿಂದ ನ್ಯಾಯಕೋರಿದ್ದಾರೆ. ಲಾಕ್ಡೌನ್ ಅವಧಿಯಲ್ಲಿ ಉದ್ಯೋಗ, ಸಂಬಳವಿಲ್ಲದೆ ಹೇಗೆ ಬದುಕುವುದು ಎಂದು ಪ್ರಶ್ನಿಸಿ, ನೆರವು ಕೋರಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಪಿ ಮಣಿವಣ್ಣನ್ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಮುಂದೇನಾಯ್ತು. ಓದಿ…