ಕೊರೊನಾವೈರಸ್ ಹರಡದಂತೆ ಲಾಕ್ಡೌನ್ ವಿಧಿಸಿರುವುದರಿಂದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಇದನ್ನು ಸರಿದೂಗಿಸಲು ಸರ್ಕಾರಿ ನೌಕರರ ಪಿಂಚಣಿ ಮೊತ್ತದಲ್ಲಿ ಇಂತಿಷ್ಟು ಮೊತ್ತ ಕಡಿತಗೊಳಿಸಲಾಗುತ್ತದೆ ಎಂಬ ಸುದ್ದಿ ಮತ್ತೊಮ್ಮೆ ಸಾಮಾಜಿಕ ಜಾಲ ತಾಣಗಳಲ್ಲಿ ಹಬ್ಬುತ್ತಿದೆ.
ನಗದು ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಪಿಂಚಣಿಗಳನ್ನು 20% ಕಡಿತಗೊಳಿಸಿದೆ ಎಂಬ ವರದಿಗಳೆಲ್ಲವೂ ಸುಳ್ಳು. ಪಿಂಚಣಿ ವಿತರಣೆಯಲ್ಲಿ ಯಾವುದೇ ಕಡಿತವಾಗುವುದಿಲ್ಲ. ಸರ್ಕಾರದ ನಗದು ನಿರ್ವಹಣಾ ಸೂಚನೆಯಿಂದ ಸಂಬಳ ಮತ್ತು ಪಿಂಚಣಿ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ.
Read more at: https://kannada.oneindia.com/news/india/false-govt-has-not-taken-any-decision-on-reducing-pension-of-employees-189791.html