ಭಾರತದಲ್ಲಿ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನದ ಬ್ರಾಂಡ್ ಆಗಿರುವ ಹೀರೋ ಎಲೆಕ್ಟ್ರಿಕ್ ತನ್ನ ಎಲ್ಲಾ ಶ್ರೇಣಿಯ ವಾಹನಗಳ ಆನ್‍ಲೈನ್ ಮಾರಾಟ ಯೋಜನೆಯನ್ನು ಘೋಷಿಸಿದೆ. (ಫ್ಲ್ಯಾಶ್ ಲೆಡ್-ಆ್ಯಸಿಡ್ ಕಡಿಮೆ ವೇಗದ ಮಾದರಿ ಹೊರತುಪಡಿಸಿ). ಈ ಯೋಜನೆಯು ಏಪ್ರಿಲ್ 17 ರಿಂದ ಮೇ 15, 2020 ವರೆಗೆ ಬುಕಿಂಗ್‍ಗೆ ಮಾತ್ರ ಸೀಮಿತವಾಗಿರುತ್ತದೆ. ಎಲ್ಲಾ ಬಗೆಯ ಮಾಡೆಲ್‍ಗಳಿಗೆ ಬುಕಿಂಗ್ ಮಾಡುವ ಶುಲ್ಕವನ್ನು 2,999 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.
ಈ ಬುಕಿಂಗ್ ಮೊತ್ತವನ್ನು ಮರುಪಾವತಿ ಮಾಡುವುದಿಲ್ಲ. ಆದರೆ, ಜೂನ್ ನಂತರದವರೆಗೆ ಲಾಕ್‍ಡೌನ್ ಅನ್ವಯವಾದರೆ ವಾಪಸ್ ನೀಡಲಾಗುತ್ತದೆ. ಮುಂಗಡವಾಗಿ ಬುಕಿಂಗ್ ಮಾಡುವಂತಹ ಗ್ರಾಹಕರು ಲಾಕ್‍ಡೌನ್ ಅವಧಿ ಮುಗಿದ ನಂತರ ಜೂನ್ ಅಂತ್ಯದವರೆಗೆ ಯಾವಾಗ ಬೇಕಾದರೂ ವಾಹನಗಳನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ.
ಹೀರೋ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬುಕ್ ಮಾಡುವ ಎಲ್ಲಾ ಗ್ರಾಹಕರಿಗೆ 5000 ರೂಪಾಯಿ ಮೌಲ್ಯದ ಇನ್‍ಸ್ಟಂಟ್ ನಗದು ರಿಯಾಯ್ತಿ ಲಭ್ಯವಿದೆ. ಇನ್ನು ಗ್ಲೈಡ್ ಮತ್ತು ಇ-ಸೈಕಲ್ ಅನ್ನು ಬುಕ್ ಮಾಡುವ ಗ್ರಾಹಕರಿಗೆ 3,000 ರೂಪಾಯಿಗಳ ರಿಯಾಯ್ತಿ ಸಿಗಲಿದೆ. ಇದಲ್ಲದೇ, ಖರೀದಿಗೆ ಶಿಫಾರಸು ಮಾಡುವಂತಹ ಗ್ರಾಹಕರಿಗೆ ಹೆಚ್ಚುವರಿಯಾಗಿ 1,000 ರೂಪಾಯಿಗಳ ರಿಯಾಯ್ತಿಯೂ ಲಭ್ಯವಿದೆ.
ಈ ಯೋಜನೆಯ ಎಲ್ಲಾ ಆಫರ್ ಗಳು ಕೇವಲ ಆನ್‍ಲೈನ್‍ನಲ್ಲಿ ಬುಕಿಂಗ್ ಮಾಡುವಂತಹ ಗ್ರಾಹಕರಿಗೆ ಲಭ್ಯವಿವೆ. ಪ್ರಸ್ತುತ ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್, ನಿಕ್ಸ್, ಆಪ್ಟಿಮಾ, ಫೋಟೊನ್, ಡ್ಯಾಶ್ ಮತ್ತು ಇಆರ್ (ವಿಸ್ತರಿತ ಶ್ರೇಣಿ) ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಹೊಂದಿದೆ. ಇದರ ಜತೆಗೆ ಗ್ಲೈಡ್ ಮತ್ತು ಇ-ಸೈಕಲ್ ಅನ್ನೂ ಹೊಂದಿದ್ದು, ಈ ವಾಹನಗಳು ಅತ್ಯುತೃಷ್ಟ ಗುಣಮಟ್ಟದ ಲೀಥಿಯಂ-ಐಯಾನ್ ಬ್ಯಾಟರಿಗಳನ್ನು ಒಳಗೊಂಡಿವೆ.