ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಬೆಂಗಳೂರು ವಸತಿ ಆಸ್ತಿ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಮೊದಲ ತ್ರೈಮಾಸಿಕದಲ್ಲಿ ಶೇಕಡ 2.9ರಷ್ಟು ಹೆಚ್ಚಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಅಸಂಖ್ಯಾತ ಐಟಿ ಹಾಗೂ ಐಟಿಇಎಸ್ ಸಂಸ್ಥೆಗಳ ಇರುವಿಕೆ ಇದಕ್ಕೆ ಕಾರಣ ಎನ್ನುವ ಅಂಶ ಮ್ಯಾಜಿಕ್‍ಬ್ರಿಕ್ಸ್‍ನ ಪ್ರಾಪ್‍ಇಂಡೆಕ್ಸ್ ನಿಂದ ಬಹಿರಂಗವಾಗಿದೆ.
ಜಾಗತಿಕ ಮಟ್ಟದಲ್ಲಿ ಕೋವಿಡ್-19 ಸಾಂಕ್ರಾಮಿಕ ಹರಡಿರುವುದು ಮತ್ತು ಲಾಕ್‍ಡೌನ್ ಹೇರಿಕೆ ಭಾರತದ ರಿಯಲ್ ಎಸ್ಟೇಟ್ ಮೇಲೆ ಪರಿಣಾಮ ಬೀರಿದ್ದರೂ, 2020ರ ಜನವರಿ, ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ವಸತಿ ಆಸ್ತಿಗಳ ಬೇಡಿಕೆ ಶೇಕಡ 4.7ರಷ್ಟು ಹೆಚ್ಚಳವಾಗಿರುವುದು ಕಂಡುಬಂದಿದೆ.
ನಿರ್ಮಾಣ ಹಂತದಲ್ಲಿರುವ ಹಾಗೂ ಸರ್ವಸಜ್ಜಿತವಾಗಿರುವ ಆಸ್ತಿ ವರ್ಗಗಗಳಲ್ಲಿ ಧನಾತ್ಮಕ ಬೇಡಿಕೆ ಕಂಡುಬಂದಿದ್ದು, ಬೆಲೆಯಲ್ಲಿ ಕ್ರಮವಾಗಿ 1.8% ಹಾಗೂ 0.8% ಹೆಚ್ಚಳ ಕಂಡುಬಂದಿದೆ. ಅಚ್ಚರಿಯ ಅಂಶವೆಂದರೆ ನಿರ್ಮಾಣ ಹಂತದಲ್ಲಿರುವ ವರ್ಗದ ಎಲ್ಲ ವಲಯಗಳಲ್ಲಿ, ಸುಸಜ್ಜಿತವಾದ ಆಸ್ತಿಗಳಿಗೆ ಹೋಲಿಸಿದರೆ ಅಧಿಕ ಪ್ರಮಾಣದಲ್ಲಿ ಬೆಲೆ ಹೆಚ್ಚಳ ಕಂಡುಬಂದಿದೆ. ಇದು ಬಿಲ್ಡರ್‍ಗಳ ಮೇಲಿನ ವಿಶ್ವಾಸವನ್ನು ತೋರಿಸುತ್ತದೆ.
Read more at: https://kannada.oneindia.com/news/business/covid19-bengaluru-residential-prices-grow-magicbricks-propinex-190769.html