ಸ್ಮಾರ್ಟ್ ಫೋನ್ ಇಲ್ಲದವರು ಕೂಡಾ ಇನ್ಮುಂದೆ ಆರೋಗ್ಯ ಸೇತು ಆಪ್ಲಿಕೇಷನ್ ಬಳಸಬಹುದಾಗಿದೆ. ಕೇಂದ್ರ ಸರ್ಕಾರವು ಈಗ ಐವಿಆರ್ ಎಸ್ ಸರ್ವೀಸ್ ಮೂಲಕ ಆರೋಗ್ಯ ಸೇತು ಅಪ್ಲಿಕೇಷನ್ ಸೌಲಭ್ಯ ಪಡೆಯುವಂತೆ ಮಾಡಿದೆ.
ಹೀಗಾಗಿ, ಇನ್ಮುಂದೆ ಫೀಚರ್ ಫೋನ್ ಹಾಗೂ ಲ್ಯಾಂಡ್ ಲೈನ್ ಫೋನ್ ಹೊಂದಿರುವವರು ಕೂಡಾ ಆರೋಗ್ಯ ಸೇತು ಆಪ್ ಜೊತೆ ಸಂಪರ್ಕ ಹೊಂದಬಹುದು. ಆರೋಗ್ಯ ಸೇತು ಇಂಟರ್ ಆಕ್ಟಿವ್ ವಾಯ್ಸ್ ರೆಸ್ಪಾನ್ಸ್ ಸಿಸ್ಟಮ್ (ಐವಿಆರ್ ಎಸ್) ಗೆ ಚಾಲನೆ ನೀಡಲಾಗಿದೆ. ಇದು ಉಚಿತ ಸೇವಾ ಸೌಲಭ್ಯವಾಗಿದೆ. 1921 ಸಂಖ್ಯೆಗೆ ಕರೆ ಮಾಡಿ ನಿಮಗೆ ಬೇಕಾದ ಆರೋಗ್ಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಈ IVRS ಸೇವೆಯು ಭಾರತದ 11 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ. ನಾಗರಿಕರು ನೀಡುವ ಪ್ರತಿ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುವುದು ಹಾಗೂ ಸ್ಮಾರ್ಟ್ ಫೋನ್ ಇಲ್ಲದವರಿಗೆ ಎಸ್ಎಂಎಸ್ ಮೂಲಕ ಅಲರ್ಟ್ ನೀಡಲಾಗುವುದು.
Read more at: https://kannada.oneindia.com/news/india/dial-1921-to-access-aarogya-setu-if-you-have-a-landline-or-no-smart-phone-191254.html