‘ಕರ್ನಾಟಕದಲ್ಲಿ ಸೇವೆಯನ್ನು ಆರಂಭಿಸುತ್ತಿರುವುದು ನಮಗೆ ಸಂತಸ ಮೂಡಿಸಿದೆ. ಲಾಕ್‍ಡೌನ್‍ನ ಈ ಅವಧಿಯಲ್ಲಿ ಪ್ರಮುಖ ಸಿಬ್ಬಂದಿಯ ಸಂಚಾರಕ್ಕೆ ಕಷ್ಟಕರವಾಗಿದೆ ಆದರೂ, ನಾವು ಉತ್ತಮ ಸೇವೆ ಮೂಲಕ ಗಣನೀಯ ಪರಿಣಾಮ ಉಂಟು ಮಾಡುವ ವಿಶ್ವಾಸದಲ್ಲಿದ್ದೇವೆ. ಮುಖ್ಯವಾಗಿ ಈ ಬಿಕ್ಕಟ್ಟಿನ ಸಂದರ್ಬದಲ್ಲಿ ಅಗತ್ಯ ವಸ್ತುಗಳನ್ನು, ಹಾಲಿ ಸೇವೆ ಒದಗಿಸುತ್ತಿರುವ ಇತರೆ ರಾಜ್ಯಗಳಂತೆಯೇ ಒದಗಿಸಲು ಒತ್ತು ನೀಡಲಿದ್ದೇವೆ. ಬೆಂಗಳೂರು ಹೊರತುಪಡಿಸಿ ಇನ್ನೂ 6-7 ನಗರಗಳಲ್ಲಿ ಮುಂದಿನ ಕೆಲವು ತಿಂಗಳಲ್ಲಿ ಸೇವೆಯನ್ನು ಆರಂಭಿಸಲಾಗುತ್ತದೆ’ ಎಂದು ಡೀಲ್‍ಶೇರ್ ಸ್ಥಾಪಕ ಮತ್ತು ಸಿ.ಪಿ.ಒ ರಜತ್ ಶಿಖರ್ ಅವರು ಹೇಳಿದರು.
ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ ಯಶಸ್ಸಿನ ನಂತರ ದೇಶದಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಸ್ಟಾರ್ಟ್ ಅಪ್ ಕಂಪನಿಯಾಗಿರುವ ಡೀಲ್ ಶೇರ್ ಇಂದು ತನ್ನ ರಾಷ್ಟ್ರವ್ಯಾಪಿ ವಿಸ್ತರಣೆಯ ಭಾಗವಾಗಿ ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ಕಾರ್ಯ ಚಟುವಟಿಕೆ ಆರಂಭಿಸಿದೆ. ಈ ಸೇವೆಯು ಬೆಂಗಳೂರಿನಲ್ಲಿ ಒಂಬತ್ತು ಕಡೆ ಲಭ್ಯವಿದೆ. ಆ ಸ್ಥಳಗಳೆಂದರೆ- ಮಡಿವಾಳ, ಬೊಮ್ಮನಹಳ್ಳಿ, ಹೊಂಗಸಂದ್ರ, ಕೂಡ್ಲು, ಕೋರಮಂಗಲ, ಬಿ.ಟಿ.ಎಂ, ಎಚ್.ಎಸ್.ಆರ್. ಲೇಔಟ್, ಹರಳೂರು ರಸ್ತೆ, ಬೆಳ್ಳಂದೂರು ಮತ್ತು ಕಸವನಹಳ್ಳಿ. ಈ ಮೂಲಕ ಡೀಲ್‍ಶೇರ್ ತನ್ನ ಸೇವೆಯನ್ನು ದೇಶದಾದ್ಯಂತ 26 ನಗರಗಳಿಗೆ ವಿಸ್ತರಿಸಿದಂತಾಗಿದೆ. ಮುಂದುವರಿದು ಅವರು, ಬಹುಭಾಷಿಕ ಗ್ರಾಹಕರನ್ನು ತಲುಪಲು ಹಿಂದಿ ಹೊರತಾಗಿ ಸಂಸ್ಥೆಯ ಆ್ಯಪ್ ಇಂಗ್ಲಿಷ್, ಕನ್ನಡ, ಮರಾಠಿ, ಗುಜರಾತಿ ಭಾಷೆಗಳಲ್ಲಿ ಲಭ್ಯವಿದೆ.