ಕೊರೊನಾವೈರಸ್‌ನಿಂದ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಗತ್ಯ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸಿದೆ. ಆದರೆ, ಈ ನಡುವೆ ಕೇಂದ್ರ ಸರ್ಕಾರದಿಂದ ಹೆಲಿಕಾಪ್ಟರ್ ಮೂಲಕ ನಗದು ಹಣವನ್ನು ಕೆಳಗೆ ಉದುರಿಸಲಾಗುತ್ತದೆ ಎಂಬ ಪೋಸ್ಟ್ ವೈರಲಾಗುತ್ತಿದೆ. ಫೇಸ್ಬುಕ್, ವಾಟ್ಸಾಪ್ ನಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಆದ್ರೆ, ಇದು ಸುಳ್ಳು ಸುದ್ದಿ ಎಂದು PIB ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ನೊಮ್ಮೆ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ.
ಆದರೆ, ಹೆಲಿಕಾಪ್ಟರ್ ಮೂಲಕ ದುಡ್ಡು ಸುರಿಯುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ ಎಂದು ಸರ್ಕಾರ ಹೇಳಿದೆ. ಈ ಬಗ್ಗೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದ ಕನ್ನಡ ಸುದ್ದಿವಾಹಿನಿ ಪಬ್ಲಿಕ್ ಟಿವಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ವಾರ್ತಾ ಮತ್ತು ಪ್ರಸಾರ ಕಾಯ್ದೆ ಉಲ್ಲಂಘಿಸಲಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿ 10ದಿನಗಳ ಕಾಲ ಸಮಯ ನೀಡಲಾಗಿದೆ ಎಂದು ವಾರ್ತಾ ಪ್ರಸಾರ ಇಲಾಖೆಯ ಪ್ರಕಟಣೆಯಲ್ಲಿದೆ.
ಇದೊಂದು ಹಣಕಾಸು ನಿಯಮ, ತಂತ್ರ ಈ ಮೂಲಕ ಕುಸಿತ ಕಂಡ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಬಹುದಾಗಿದೆ. ದೊಡ್ಡ ಮೊತ್ತದ ಹಣವನ್ನು ಮುದ್ರಿಸಿ, ಅದನ್ನು ಜನರಿಗೆ ಹಂಚುವುದು ಸಹ ಈ ವಿಧಾನಗಳಲ್ಲಿ ಒಂದು, ಆದರೆ, ಹೆಲಿಕಾಪ್ಟರ್ ನಿಂದ ಹಣ ಎಸೆಯುವುದಿಲ್ಲ.
Read more at: https://kannada.oneindia.com/news/business/fake-the-government-is-not-going-drop-money-from-helicopters-189642.html