ಕೊರೊನಾವೈರಸ್ ಸೋಂಕು ಹರಡದಂತೆ ಭಾರತದಲ್ಲಿ ವಿಧಿಸಿರುವ ಲಾಕ್ಡೌನ್ ಮೂರನೇ ಹಂತದಲ್ಲಿದೆ. ಈ ಅವಧಿಯಲ್ಲಿ ಭಾರತದಲ್ಲಿ ನೆಲೆಸಿದ್ದ ವಿದೇಶಿಯರಿಗೆ ತಮ್ಮ ದೇಶಕ್ಕೆ ತೆರಳಲು ಅವಕಾಶ ನೀಡಲಾಗಿತ್ತು. ಆದರೆ ಒಬ್ಬ ಜರ್ಮನ್ ಮಾತ್ರ ತನ್ನ ದೇಶಕ್ಕೆ ತೆರಳಲು ಮನಸ್ಸು ಮಾಡಲೇ ಇಲ್ಲ. ಟಾಮ್ ಹಾಂಕ್ಸ್ ನಟನೆಯ ಟರ್ಮಿನಲ್ ಚಿತ್ರದ ಮಾದರಿಯಲ್ಲಿ ವಿಮಾನ ನಿಲ್ದಾಣದಲ್ಲೇ ನೆಲೆಸಿದ್ದ.
ಸುಮಾರು 55 ದಿನಗಳಿಂದ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತವಾಗಿದೆ. ವಿಮಾನ ನಿಲ್ದಾಣದಲ್ಲಿ ಅನಿವಾರ್ಯವಾಗಿ ಜರ್ಮನ್ ಪ್ರಜೆ ಉಳಿದುಕೊಳ್ಳಬೇಕಾಯಿತು. ವಿಮಾನಯಾನ ಸಂಸ್ಥೆಗಳು ವಿಮಾನ ಏರಲು ಬಿಡಲಿಲ್ಲ, ಆತ ಹೋಗಬೇಕಾದ ಕಡೆಗೆ ವಿಮಾನ ಹಾರಲಿಲ್ಲ.
ವಿಮಾನ ನಿಲ್ದಾಣದಲ್ಲೇ ನೆಲೆ ಕಂಡು ಕೊಂಡಿದ್ದ ಆತ ಕೊರೊನಾವೈರಸ್ ನೆಗಟಿವ್ ಆಗಿದ್ದರಿಂದ ನಿಲ್ದಾಣದ ಸಿಬ್ಬಂದಿ ಕೂಡಾ ಅಲ್ಲೇ ನೆಲೆಸಲು ಸಹಕರಿಸಿದ್ದರು. ಆದರೆ, ಮೇ 12ರಂದು ದೆಹಲಿಯ ಐಜಿಐ ನಿಲ್ದಾಣ ತೊರೆದು ಆಮ್ ಸ್ಟ್ರಾಡ್ಯಾಮ್ ಗೆ ಹಾರಬೇಕಾಯಿತು. ಮುಂಜಾನೆ ಕೆಎಲ್‌ಎಂ ವಿಮಾನದಲ್ಲಿಆಮ್ ಸ್ಟ್ರಾಡ್ಯಾಮ್ ಗೆ ಹೊರಟರು, ಬೋರ್ಡಿಂಗ್ ಮೊದಲು COVID-19 ಪರೀಕ್ಷೆ ನಡೆಸಿದ್ದು, ನೆಗೆಟಿವ್ ಎಂದು ಐಜಿಐ ಸಿಬ್ಬಂದಿ ಹೇಳಿದರು.
Read more at: https://kannada.oneindia.com/features/the-terminal-film-scene-repeated-a-german-stuck-at-delhis-igi-airport-191790.html