ಕೊರೊನಾವೈರಸ್ ಸೋಂಕು ಹರಡದಂತೆ ಮೂರನೇ ಅವಧಿಯ ಲಾಕ್ಡೌನ್ ಜಾರಿಯಲ್ಲಿದೆ. ಈ ನಡುವೆ ಹಂತ ಹಂತವಾಗಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ ಒಂದಷ್ಟು ರೈಲುಗಳು ಸಂಚಾರ ಆರಂಭಿಸಲಿವೆ.
ನವದೆಹಲಿಯಿಂದ ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಹಾಗೂ ಜಮ್ಮು ತಾವಿ ನಿಲ್ದಾಣಗಳಿಗೆ ವಿಶೇಷ ರೈಲುಗಳು ಸಂಚರಿಸಲಿವೆ. ಶ್ರಮಿಕ ರೈಲುಗಳ ಪ್ರತಿ ಕೋಚ್ ಗಳಲ್ಲಿ ಕೇವಲ 54 ಪ್ರಯಾಣಿಕರಿಗೆ ಅನುಮತಿ ನೀಡಲಾಗಿತ್ತು. ಈ ಪ್ಯಾಸೆಂಜರ್ ರೈಲಿನಲ್ಲಿ 72 ಮಂದಿ ಪ್ರಯಾಣಿಸಬಹುದಾಗಿದೆ. ದರದಲ್ಲೂ ಯಾವುದೇ ಬದಲಾವಣೆ ಇಲ್ಲ. ಟಿಕೆಟ್ ಬುಕ್ಕಿಂಗ್ ಮಾಡಲು IRCTC ವೆಬ್ ತಾಣಕ್ಕೆ ಭೇಟಿ ನೀಡಿ, ಎಂದಿನ ಕ್ರಮದಂತೆ ಟಿಕೆಟ್ ಬುಕ್ ಮಾಡಿ..
Read more at: https://kannada.oneindia.com/news/india/indian-railways-to-restart-passenger-train-when-and-how-to-book-tickets-191647.html