#LifeAfterCorona: ಕೊರೊನಾ ನಂತರದ ಬದುಕು ಹೇಗಿರಲಿದೆ?

ಕೊರೊನಾವೈರಸ್‌ ಭೀತಿಯಿಂದ ಬದುಕು ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬುಡಮೇಲಾಗುತ್ತಿರುವುದು ಗೋಚರವಾಗುತ್ತಿದೆ. ಈಗಾಗಲೇ ಪರಿಣಿತರು, ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಹಾಗಂತ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುತ್ತಿದ್ದಾರೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ.

ಈ ಹಿನ್ನೆಲೆಯಲ್ಲಿ, ‘ಒನ್ಇಂಡಿಯಾ ಕನ್ನಡ’ #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸುತ್ತಿದೆ.

ಕೊರೊನಾ ಸುತ್ತ ಸುಳ್ಳು ಸುದ್ದಿಗಳು, ಅಸಹ್ಯಕರ ರೀತಿಯಲ್ಲಿ ಮಾಹಿತಿ ಹಂಚಿಕೆಯಿಂದಾಗಿ ಗೋಜಲಾಗಿರುವ ಸನ್ನಿವೇಶದಲ್ಲಿ ಸಮುದಾಯಕ್ಕೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು. ಇದಕ್ಕಾಗಿ ಕೆಳಗೆ ನಾಲ್ಕು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ನಿಮ್ಮ ಉತ್ತರಗಳನ್ನು ಸರಣಿ ರೂಪದಲ್ಲಿ ‘ಒನ್‌ಇಂಡಿಯಾ ಕನ್ನಡ’ ವೆಬ್‌ಸೈಟ್ ಹಾಗೂ ಅದರ ಸಾಮಾಜಿಕ ಜಾಲತಾಣಗಳ ಮೂಲಕ ಜನರ ಮುಂದಿಡುತ್ತೇವೆ.

Read more at: https://kannada.oneindia.com/features/lifeaftercorona-how-the-world-will-cope-up-with-it-189430.html

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

Leave a Reply

Your email address will not be published. Required fields are marked *