ಲಾಕ್‍ಡೌನ್ ಅವಧಿಯಲ್ಲಿ ಕೂಡಾ ಕರ್ನಾಟಕದ ಗ್ರಾಹಕರು ಸಂಪರ್ಕ ಸಾಧಿಸುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ವೊಡಾಫೋನ್ ಐಡಿಯಾ ತನ್ನ ಡಿಜಿಟಲ್ ಪ್ಲಾಟ್‍ಫಾರಂ ಮೂಲಕ ಗ್ರಾಹಕರು ಎಲ್ಲ ಸೇವೆಗಳನ್ನು ಪಡೆಯಲು ಮತ್ತು ರೀಚಾರ್ಜ್ ಮಾಡಲು ಅವಕಾಶ ಮಾಡಿಕೊಟ್ಟಿದೆ.
ವೊಡಾಫೋನ್ ಐಡಿಯಾ ಗ್ರಾಹಕ ಸೇವಾ ತಂಡದವರು ವಿಡಿಯೋ ಲಿಂಕ್, ಜಿಐಎಫ್ ಮತ್ತು ಡಾಕೆಟ್‍ಗಳ ಮೂಲಕ ರೀಚಾರ್ಜ್ ಮಾಡುವ ಪ್ರಕ್ರಿಯೆಯನ್ನು ವಿವರಿಸುವುದಲ್ಲದೇ ಇದರ ಮೂಲಕ ಬಿಲ್ ಹೇಗೆ ಪಾವತಿಯಾಗುತ್ತದೆ ಎಂದು ವಿವರಿಸಿ ಡಿಜಿಟಲ್ ಪ್ಲಾಟ್‍ಫಾರಂನ ಪ್ರಯೋಜನಗಳಿಗೆ ಸಂಬಂಧಿಸಿದಂತೆ ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ರೀಚಾರ್ಜ್ ಪ್ರಕ್ರಿಯೆ ವಿವರಗಳನ್ನು ವೊಡಾಫೋನ್ ಆ್ಯಪ್, ಮೈ ಐಡಿಯಾ ಆ್ಯಪ್ ಮೂಲಕವೂ ನೀಡಲಾಗುತ್ತಿದ್ದು, ಡಿಜಿಟಲ್ ವ್ಯಾಲೆಟ್‍ಗಳ ಮೂಲಕ ಇದನ್ನು ಸಕ್ರಿಯಗೊಳಿಸಲಾಗುತ್ತದೆ.
ಪ್ರಿಪೇಯ್ಡ್ ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಎಟಿಎಂಗಳ ಮೂಲಕವೂ ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಇದರ ಜತೆಗೆ ವೊಡಾಫೋನ್ ಐಡಿಯಾ, ಡಿಜಿಟಲ್ ವ್ಯವಸ್ಥೆ ಪರಿಚಿತವಿರುವ ಗ್ರಾಹಕರು #Rechargeforgood ಮೂಲಕ ತಮ್ಮ ಡಿಜಿಟಲ್ ವ್ಯವಸ್ಥೆಯ ಪರಿಚಯ ಇಲ್ಲದ ಸ್ನೇಹಿತರು, ಸಂಬಂಧಿಕರು ಮತ್ತು ನೆರೆಹೊರೆಯವರಿಗೆ ನೆರವಾಗುವಂತೆಯೂ ಮನವಿ ಮಾಡುತ್ತಿದೆ.
Read more at: https://kannada.oneindia.com/news/business/how-to-recharge-vodafone-idea-in-karnataka-during-lockdown-189292.html