ಪ್ರಧಾನಿ ಮೋದಿ ಅವರ ಆಶಯದಂತೆ ಐದು ಸ್ತಂಭಗಳನ್ನು ಬಲ ಪಡಿಸಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದರು. ಪ್ರಸಕ್ತ ಹಣಕಾಸು ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಗೆ ಸಂಬಂಧಿಸಿದ ವಿವಿಧ ಹೂಡಿಕೆ ಡಿಕ್ಲೇರೇಷನ್ ಸಲ್ಲಿಕೆಯ ದಿನಾಂಕವನ್ನು ಈಗಾಗಲೇ ವಿಸ್ತರಣೆ ಮಾಡಲಾಗಿದೆ. ಈಗ 2019-20ನೇ ಸಾಲಿನ ಐಟಿ ರಿಟರ್ನ್ಸ್ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ.
ಜುಲೈ 31, 2020 ಹಾಗೂ ಅಕ್ಟೋಬರ್ 31, 2020 ಇದ್ದ ಕೊನೆ ದಿನಾಂಕವನ್ನು ನವೆಂಬರ್ 30, 2020ಕ್ಕೆ ನಿಗದಿ ಮಾಡಲಾಗಿದೆ. ಇದರ ಜೊತೆಗೆ ತೆರಿಗೆ ಲೆಕ್ಕಪರಿಶೋಧನೆ(tax audit) ಕೊನೆ ದಿನಾಂಕವನ್ನು ಸೆಪ್ಟೆಂಬರ್ 30, 2020ರಿಂದ ಅಕ್ಟೋಬರ್ 31, 2020ಕ್ಕೆ ನಿಗದಿ ಪಡಿಸಲಾಗಿದೆ.
ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟದಲ್ಲಿರುವ ತೆರಿಗೆದಾರರಿಗೆ ನಿರಾಳವಾಗುವ ಸುದ್ದಿ ಸಿಕ್ಕಿದೆ. ಸರ್ಕಾರದಿಂದ ಸಿಗುವ ಪರಿಹಾರ ಕ್ರಮಗಳ ಪ್ರಯೋಜನಗಳನ್ನು ತೆರಿಗೆದಾರರು ಪಡೆಯುವುದಕ್ಕಾಗಿ ಆದಾಯ ತೆರಿಗೆ ರಿಟರ್ನ್ (ಐಟಿಆರ್) ದಿನಾಂಕವನ್ನು ಪರಿಷ್ಕರಿಸಿರುವುದಾಗಿ ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.