ಈ ಕೊರೊನಾ ವೈರಸ್ ಹಬ್ಬಿದ ಕಡೆಯಲ್ಲೆಲ್ಲ 98% ಜನರಲ್ಲಿ ಒಂಥದರದ ದುಗುಡ, ಆರೋಗ್ಯದ ಬಗ್ಗೆ ಧಿಡೀರ್ ಕಾಳಜಿ, ಭವಿಷ್ಯದ ದಿನಗಳ ಬಗ್ಗೆ ಅತಂತ್ರತೆ ಮತ್ತು ಸ್ವಲ್ಪೇ ಸ್ವಲ್ಪ ಮಟ್ಟಿಗಾದರೂ ಸರಿ ತುಸು ನೆಮ್ಮದಿಯನ್ನು ತುಂಬಿದೆ. ಆದರೆ ಈ ನೆಮ್ಮದಿ ಅನ್ನುವುದು ತುಂಬಾ ಅಲ್ಪಾಯುಷಿ.
ಜಗತ್ತಿನಾದ್ಯಂತ ಮನುಜರಿಂದಲೇ ಅನೇಕ ರೀತಿಯಲ್ಲಿ ಅಪಾರವಾಗಿ ಘಾಸಿಗೊಂಡು ಮಲೀನಗೊಂಡ ಪ್ರಕೃತಿಯು ಆಯಾ ಪ್ರದೇಶಗಳಲ್ಲಿ ಲಾಕ್‍ಡೌನ್ ಇರುವಷ್ಟು ದಿನಗಳ ಕಾಲ ತಿತ್ತಿತುಂಬಿದ್ದ ಮಾಲಿನ್ಯವನ್ನು ಕರಗಿಸಿಕೊಂಡು ತುಸು ಸರಾಗವಾಗಿ ಉಸಿರಾಡಿಕೊಂಡಿರುತ್ತದೆ ಅನ್ನುವುದು ಮೊದಲನೇ ತಾತ್ಕಾಲಿಕ ನೆಮ್ಮದಿಯಾದರೆ ಎರಡನೇಯದು, ಮನೆಯಲ್ಲಿ ಎಷ್ಟೇ ಅನಿವಾರ್ಯತೆ ಇದೆಯೆಂದರೂ ಉದ್ಯೋಗದ ಒತ್ತಡ ಮತ್ತು ಅನಿವಾರ್ಯತೆಗಳಿಂದಾಗಿ ಕುಟುಂಬದೊಂದಿಗೆ ಸಮಯ ವ್ಯಯಿಸಲಾಗದವರೆಲ್ಲ ದಿನ ಎರಡು ದಿನವಲ್ಲ ತಿಂಗಳು ಪೂರ್ತಿ ಮನೆಯಲ್ಲಿ ಎಲ್ಲರೂ ಒಟ್ಟಿಗೆ ಸೇರಿ ಇರ್ತಿವಲ್ಲ ಅನ್ನೋದು
ಆದರೆ ಈ ಎರಡನೇಯದು ತೀರಾ ವಯಕ್ತಿಕ, ಸಾರ್ವತ್ರಿಕ ಮಾತಲ್ಲ. ಅಂದಂದಿಗೆ ದುಡಿದರೇ ಅಂದಂದಿನ ಊಟ ಎನ್ನುವ ಪರಿಸ್ಥಿತಿ ಇರುವ ಮನೆಗಳಿಗೆ ಹೀಗೆ ಮನೆಯಲ್ಲಿ ಕಾಲುಕಟ್ಟಿಕೊಂಡು ಬಿದ್ದಿರುವಂಥ ನರಕ ಇನ್ನೊಂದಿಲ್ಲ ಮತ್ತು ಅಂಥವರ ಸಂಖ್ಯೆ ಹೆಚ್ಚಿದೆ…ಇನ್ನು ನೀವು ಕೇಳಿದ ಪ್ರಶ್ನೆಗಳಿಗೆ ಹಿರಿಯ ಕಲಾವಿದೆ
ಜಯಲಕ್ಷ್ಮಿ ಪಾಟೀಲ್ ನೀಡಿದ ಉತ್ತರಗಳು ಮುಂದಿವೆ…
Read more at: https://kannada.oneindia.com/life-after-corona/actress-jayalaxmi-patil-on-prevention-and-precaution-190100.html