ಲಾಕ್ಡೌನ್ ಪರಿಸ್ಥಿತಿಯಲ್ಲಿರುವ ನಮ್ಮ ಜನ ಸಮುದಾಯಕ್ಕೆ ನಿಯಮ ಪಾಲನೆ ಸಂಕಲ್ಪ ನಿಷ್ಠ ಬೇಕಿದೆ. ಮುಂದೇನು ಎಂಬುದರ ಬಗ್ಗೆ ಮುನ್ನೋಟಗಳು ಬೇಕಿವೆ. ದೂರದೃಷ್ಟಿಯಿಂದ ಕೂಡಿರುವ ಸಲಹೆ, ಸೂಚನೆಗಳು ಜನರಲ್ಲಿ ಆತ್ಮವಿಶ್ವಾಸ ತುಂಬಬಹುದು, ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಲು ಜನರನ್ನು ಸಜ್ಜುಗೊಳಿಸಬಹುದು ಎಂಬ ನಂಬಿಕೆ, ವಿಶ್ವಾಸ ನಮ್ಮಲಿದೆ. ಈ ನಿಟ್ಟಿನಲ್ಲಿ ಒನ್ಇಂಡಿಯಾ ಕನ್ನಡ #LifeAfterCorona ಸರಣಿ ಆರಂಭಿಸಿದ್ದು, ಈ ಸರಣಿಯ ಮೂರನೇ ಲೇಖನ/ವಿಡಿಯೋದಲ್ಲಿ ಮಠ ಚಿತ್ರ ಖ್ಯಾತಿಯ ಗುರುಪ್ರಸಾದ್ ಅವರು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಸಿನಿಮಾ ನಿರ್ದೇಶಕ, ಸಂಭಾಷಣೆಕಾರ, ಗೀತರಚನೆಕಾರ ಹಾಗೂ ನಟ ‘ಮಠ’ ಗುರುಪ್ರಸಾದ್ ಅವರು ತಮ್ಮ ಮುಂದಿನ ಸಿನಿಮಾ ‘ರಂಗನಾಯಕ’ ಚಿತ್ರಕಥೆ ಮಾಡಿಕೊಳ್ಳುವಲ್ಲಿ ಬಿಜಿಯಾಗಿದ್ದಾರೆ. ಅದರ ಜತೆ ಜತೆಗೆ ಆಗಾಗ ಫೇಸ್ ಬುಕ್ ಲೈವ್ ಬರುತ್ತಿದ್ದು, ಸ್ಕ್ರಿಪ್ಟ್ ಬರವಣಿಗೆ ಬಗ್ಗೆ ಆನ್ ಲೈನ್ ಕ್ಲಾಸ್ ಮಾಡುವ ಉಮೇದಿನಲ್ಲಿದ್ದಾರೆ.
ಈ ಮಧ್ಯೆ ಒನ್ಇಂಡಿಯಾ ಕನ್ನಡದ ಅಭಿಯಾನದ ಪ್ರಶ್ನೆಗಳಿಗೆ ತಮ್ಮದೇ ಧಾಟಿಯ ಉತ್ತರ ನೀಡಿದ್ದಾರೆ. ಇದರಲ್ಲಿ ಗುರು ‘ಪಂಚ್’ ಇದೆ. ಕೊಂಚ ಎಮೋಷನ್ ಇದೆ. ಅದೆಲ್ಲಕ್ಕಿಂತ ಸೈನ್ಸ್ ಇಸ್ ಗಾಡ್ ಎಂಬ ಸ್ಟೇಟ್ ಮೆಂಟ್ ಇದೆ. ‘ಮುಚ್ಚಿಕೊಂಡು’, ಅಂದರೆ ‘ಕಿಟಕಿ ಮುಚ್ಚಿಕೊಂಡು’ ಮನೆಯಲ್ಲಿದ್ದು ಬಿಡಿ ಎಂಬ ಆಗ್ರಹಪೂರ್ವಕ ಸಲಹೆಯನ್ನೂ ನೀಡಿದ್ದಾರೆ. ನಮ್ಮ ಪ್ರಶ್ನೆಗಳಿಗೆ ‘ಗುರು ಉಪದೇಶ’ ಅಲ್ಲ, ಉತ್ತರ ಇದೆ.
Read more at: https://kannada.oneindia.com/life-after-corona/director-mata-guruprasad-says-science-is-god-189682.html