ಮಟ್ಕಾ ಸಾಮ್ರಾಜ್ಯದ ಮುಕುಟವಿಲ್ಲದ ಮಹಾರಾಜ ರತನ್

ಮಟಕಾ ಸಾಮ್ರಾಜ್ಯದ ಮುಕುಟವಿಲ್ಲದ ಮಹಾರಾಜ ರತನ್ ಲಾಲ್ ಖತ್ರಿ ಎಂಬ ಓಸಿ/ಮಟಕಾ ದೊರೆಯೂ ಮತ್ತವನ ಯುಗಾಂತ್ಯವಾದ ಕಥೆಯನ್ನು ವಿಸ್ತಾರವಾಗಿ ನಿಮ್ಮ ಮುಂದಿಟ್ಟಿದ್ದಾರೆ ಪತ್ರಕರ್ತ ವಿಶ್ವಾಸ್ ಭಾರದ್ವಾಜ್…

ರತನ್ ಲಾಲ್ ಖತ್ರಿ.. ಈ ಹೆಸರು ದೇಶದ ಮಟಕಾ ಪ್ರೇಮಿಗಳಿಗೆ ಖಂಡಿತಾ ಚಿರಪರಿಚಿತವಾಗಿರತ್ತೆ. ಬೇಕಿದ್ದರೆ ನೀವು ದೇಶದ ಗ್ರಾಮದ ಯಾವುದೇ ಅನಕ್ಷರಸ್ಥನಿಗೆ ಕೇಳಿ ನೋಡಿ, ರತನ್ ಲಾಲ್ ಖತ್ರಿ ಎಂದರೆ ಓ! ಸೆಟ್ಟಾ, ಮಟಕಾ, ಓಸಿ ಎನ್ನುತ್ತಾರೆ. ಈ ದೇಶದಲ್ಲಿ ಓಸಿ (ಓಪನ್ ಮತ್ತು ಕ್ಲೋಸ್) ಎನ್ನುವ ನಿರ್ಬಂಧಿತ ಕಾನೂನು ಬಾಹಿರ ಜೂಜೊಂದನ್ನು ಸಂಘಟನಾತ್ಮಕವಾಗಿ ಹಳ್ಳಿ ಹಳ್ಳಿಗಳಿಗೂ ಹರಡುವುದು ಮತ್ತು ಅನಭಿಷಿಕ್ತವಾಗಿ ಆಳುವುದು ಅಷ್ಟು ಸುಲಭದ ವಿಷಯವಲ್ಲ.

ಜೂಜಿನಂತಹ ಕಾನೂನುಬಾಹಿರ ದಂದೆಯಲ್ಲಿ ಮೋಸ ವಂಚನೆಗಳು ಸಾಮಾನ್ಯ. ಆದರೆ ಓಸಿ ಅಥವಾ ಮಟ್ಕಾದಲ್ಲಿ ಊಹೂಂ! ಸುತಾರಾಂ ಇಲ್ಲ. ಎರಡಂಕಿಯಲ್ಲಿ ಓಪನ್ ಅಥವಾ ಕ್ಲೋಸ್ ಹೊಡೆದರೆ ಕಟ್ಟಿದ ಒಂದು ರೂಪಾಯಿಗೆ 7 ರೂಪಾಯಿ, ಡಬಲ್ ಡಿಜಿಟ್ ಮ್ಯಾಚ್ ಆದರೆ 70 ರೂಪಾಯಿ, ಮೂರು ಡಿಜಿಟ್ ಬಂದುಬಿಟ್ಟರೆ 700 ರೂಪಾಯಿ ನಿಕ್ಕಿ. ಹತ್ತೇ ರೂಪಾಯಿ ಕಟ್ಟಿ ಡಬ್ಬಲ್ ಡಿಜಿಟ್ ಹೊಡೆದರೂ 700 ರೂಪಾಯಿ ಲಾಭ.

Read more at: https://kannada.oneindia.com/features/matka-king-ratan-khatri-biography-in-kannada-191623.html

Author: Malenadiga

ಹುಟ್ಟಿದ್ದು ಚಿಕ್ಕಮಗಳೂರಿನಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮತ್ತು ತಂತ್ರಜ್ಞಾನದ ಅಳಿವು, ಉಳಿವು ಬೆಳವಣಿಗೆಯಲ್ಲಿ ಬಗ್ಗೆ ಆಸಕ್ತಿಯನ್ನು ಹೊಂದಿದ್ದೇನೆ. ಒನ್ಇಂಡಿಯಾ ವೆಬ್ ತಾಣದಲ್ಲಿ ಸುದ್ದಿ ಸಂಪಾದಕನಾಗಿದ್ದೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಡಿ. ಕನ್ನಡ ಸಾಹಿತ್ಯ, ಫೋಟೋಗ್ರಫಿ ಮತ್ತು ಚಾರಣ. ನನ್ನ ಆಸಕ್ತಿ ವಿಷಯಗಳು. ಸಾಹಿತ್ಯಾಸಕ್ತಿಯಿಂದ ನಿರ್ಮಿಸಿದ ತಾಣಗಳು, ಕನ್ನಡಕವಿ.ಕಾಂ, ತೇಜಸ್ವಿ ವಿಸ್ಮಯ.ಕಾಂ. ತೇಜಸ್ವಿ ಮೇಲಿನ ಪ್ರಭಾವದಿಂದ ಸಹ ನಿರ್ಮಿಸಿದ್ದು ಹಕ್ಕಿಪುಕ್ಕ.ಕಾಂ

Leave a Reply

Your email address will not be published. Required fields are marked *