ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ text editor ಸಾಧ್ಯವಾಗಿಸಿರುವ ‘ಪದ’ ತಂತ್ರಾಂಶದಲ್ಲಿ ಮುಖ್ಯವಾಗಿ ಕನ್ನಡಕ್ಕೆ ಹಲವು ರೀತಿಯ ವಿಶೇಷ ಸೌಲಭ್ಯಗಳನ್ನು ಒದಗಿಸಿದೆ. ವಿಂಡೋಸ್ ಅಥವಾ ಲಿನಾಕ್ಸ್ ಆವೃತ್ತಿಯಲ್ಲಿ ಪದ ತಂತ್ರಾಂಶ ಉಚಿತವಾಗಿ ಡೌನ್ ಲೋಡ್ ಗೆ ಲಭ್ಯವಿದೆ. ಆಂಡ್ರಾಯ್ಡ್ ಮಾರುಕಟ್ಟೆಗೂ ಪದ ಲಗ್ಗೆ ಇಟ್ಟು ಮೊಬೈಲ್ ಗಳಲ್ಲೂ ಕನ್ನಡ ಕೀಬೋರ್ಡ್ ಎಡಿಟರ್ ಕಾಣಿಸಿಕೊಂಡು ವರ್ಷಗಳೆ ಕಳೆದಿವೆ. ಈಗ ತುಳು ಭಾಷೆಯ ಎಡಿಟರ್ ಅಪ್ಲಿಕೇಷನ್ ಸಿದ್ಧಪಡಿಸಿದ್ದಾರೆ ತಂತ್ರಜ್ಞ ಲೋಹಿತ್ ಡಿ.ಎಸ್.
ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ ‘ಬರಹ’ ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟು ಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ‘ನುಡಿ’ ತಂತ್ರಾಂಶದಲ್ಲಿ ಹೆಚ್ಚಿನ ಸೌಲಭ್ಯಗಳಿಲ್ಲ ಮತ್ತು ಡೌನ್ಲೋಡ್ ಮಾಡಲು ಬೇಕಾದ ತಾಣ ಅಂತೂ ಇದೆ ಸರಿಯಾಗಿದೆ ಎಂದು ತಂತ್ರಜ್ಞ ಮಿತ್ರರೊಬ್ಬರು ಇದೀಗ ತಿಳಿಸಿದರು.
ಗೂಗಲ್ ಟ್ರಾನ್ಸ್ ಲಿಟೇರೇಷನ್ ಬಳಕೆ ಎಲ್ಲರಿಗೂ ಒಗ್ಗುತ್ತಿಲ್ಲ. ಕುವೆಂಪು ತಂತ್ರಾಂಶ ಇತ್ತೀಚೆಗೆ ಬಿಡುಗಡೆಯಾದರೂ ಜನರಿಗೆ ತಲುಪುತ್ತಿಲ್ಲ. ಡಿಟಿಪಿಗೆ ಹೊಂದಿಕೊಳ್ಳುವ ತಂತ್ರಾಂಶ ಇನ್ನೂ ತಯಾರಿಕೆ ಹಂತದಲ್ಲೇ ಇದೆ. ಕನ್ನಡದಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ ಎಂದರೆ ಫಾಂಟ್ ತಯಾರಿಕೆ, ಎಡಿಟರ್ ಅಪ್ಲಿಕೇಷನ್, ವರ್ಡ್ ಪ್ರೊಸೆಸರ್ ಮಾತ್ರ ಎಂಬಲ್ಲಿಗೆ ಬಂದು ನಿಂತಿದೆ.
Read more at: https://kannada.oneindia.com/features/pada-tulu-app-comes-with-dedicated-tulu-text-editor-191312.html