ವಿಶ್ವದ ಬಲಿಷ್ಠ ರಾಷ್ಟ್ರಗಳಿಗೆ ಸವಾಲು ಹಾಕಿರುವ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಇನ್ನಿಲ್ಲ ಎಂಬ ಸುದ್ದಿ ಹಾಗೂ ಅದಕ್ಕೆ ಸಂಬಂಧಪಟ್ಟ ಚಿತ್ರಗಳು ಸಾಮಾಜಿಕ ಜಾಲ ತಾಣಗಳಲ್ಲಿ ಅತ್ಯಂತ ವೇಗವಾಗಿ, ಅತಿ ಹೆಚ್ಚು ಹಂಚಿಕೆಯಾಗಿವೆ. ಆದರೆ, ಈ ಚಿತ್ರಗಳ ಸತ್ಯಾಸತ್ಯತೆ ಬಗ್ಗೆ ತಲೆಕೆಡಿಸಿಕೊಂಡವರು ಕಡಿಮೆ. ಇತ್ತೀಚೆಗೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರಿಗೆ ಬ್ರೈನ್ ಡೆಡ್ ಆಗಿದೆ.
ಕೋಮಾಕ್ಕೆ ಜಾರಿ ನಂತರ ಮೃತರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು, ವದಂತಿಗಳು ಹರಡುತ್ತಿವೆ. ಅಸಲಿಗೆ ಈ ಕಿಮ್ ಜಾಂಗ್ ಉನ್ ಬದುಕಿತ್ತಿದ್ದಾರೆಯೇ, ಬದುಕಿದ್ದರೆ ಎಲ್ಲಿದ್ದಾರೆ, ಅಥವಾ ಮೃತಪಟ್ಟಿದ್ದರೆ ಯಾಕೆ ಅದನ್ನು ಗೌಪ್ಯವಾಗಿ ಇರಿಸಲಾಗಿರುವುದರಿಂದ ಯಾವುದನ್ನು ಇದು ಹೀಗೆ ಎಂದು ಹೇಳಲು ಆಗುತ್ತಿಲ್ಲ. ಆದರೆ, ಶವಪೆಟ್ಟಿಗೆಯಲ್ಲಿರುವ ಉನ್ ಚಿತ್ರ ಮಾತ್ರ ನಕಲಿ ಎಂದು ಸ್ಪಷ್ಟವಾಗಿ ಹೇಳಬಹುದು.