ಕೊರೊನಾವೈರಸ್ ನಿಂದಾಗಿ ದೇಶ, ವಿದೇಶಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಈ ನಡುವೆ ವಿವಿಧ ದೇಶಗಳಲ್ಲಿಸಿಲುಕಿರುವ ಭಾರತೀಯರನ್ನು ಕರೆತರಲು ಭಾರತೀಯ ಸರ್ಕಾರವು ವಂದೇ ಭಾರತ್ ಮಿಷನ್ ಹಮ್ಮಿಕೊಂಡಿದೆ. ಇದರ ಭಾಗವಾಗಿ ಲಂಡನ್ನಿಂದ ಕನ್ನಡಿಗರು ಸೇರಿದಂತೆ 323 ಮಂದಿ ಪ್ರಯಾಣಿಕರು ಸುರಕ್ಷಿತವಾಗಿ ಬೆಂಗಳೂರು ತಲುಪಿದ್ದಾರೆ. ಲಂಡನ್ ನಲ್ಲಿ ಸಿಲುಕಿದ್ದ ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಶೇಷ ವಿಮಾನ 1803 ಮೇ.11ರ ಮಧ್ಯರಾತ್ರಿ 3 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕಿತ್ತು. ಆದರೆ, ಒಂದೂವರೆ ಗಂಟೆ ತಡವಾಗಿ ವಿಮಾನ ನಿಲ್ದಾಣ ತಲುಪಿದೆ.
ಲಂಡನ್ ನಿಂದ ರಾಜ್ಯಕ್ಕೆ ಬಂದಿರುವ ಕನ್ನಡಿಗರು ಉಳಿದುಕೊಳ್ಳಲು ಹೋಟೆಲ್, ರೆಸಾರ್ಟ್ ಗಳನ್ನು ಬುಕ್ ಮಾಡಲಾಗಿದೆ. ಪ್ರಯಾಣಿಕರ ಆರೋಗ್ಯ ಪರಿಸ್ಥಿತಿಗೆ ಅನುಗುಣವಾಗಿ ಎ, ಬಿ ಮತ್ತು ಸಿ ಗ್ರೇಡ್ ಗಳಾಗಿ ವಿಂಗಡಣೆ ಮಾಡಲಾಗಿದ್ದು, ಎ ಗ್ರೇಡ್ ಹೊಂದಿರುವವರು ರಾಜೀವ್ ಗಾಂಧಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಬಿ ಮತ್ತು ಸಿ ಗ್ರೇಡ್ ಹೊಂದಿರುವವರು ಹೋಟೆಲ್ ಮತ್ತು ರೆಸಾರ್ಟ್ ಗಳಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ಕ್ವಾರಂಟೈನ್ ನಲ್ಲಿರುವವರೇ ವೆಚ್ಚವನ್ನು ಭರಿಸಬೇಕು. ಪಾಸ್ ಪೋರ್ಟ್ ದಾಖಲೆ ನೀಡಿ ಸಿಮ್ ಪಡೆಯಲು ಅವಕಾಶ ನೀಡಲಾಗಿದೆ
Read more at: https://kannada.oneindia.com/news/bengaluru/vande-bharat-mission-flight-from-london-lands-in-bengaluru-191588.html