ಸಾಮಾಜಿಕ ಜಾಲ ತಾಣ, ಸರ್ಚ್ ಇಂಜಿಂಗ್ ಗಳಲ್ಲಿ ಭಾರತೀಯರು ಹೆಚ್ಚೆಚ್ಚು ಹುಡುಕಾಟ ನಡೆಸಿದ್ದು ಯಾವುದರ ಬಗ್ಗೆ? ಏನೆಲ್ಲ ಹೊಸ ಅಭ್ಯಾಸ ಬೆಳೆಸಿಕೊಂಡಿದ್ದಾರೆ? ಕೊರೊನಾ ಬಗ್ಗೆ ಕೂಡಾ ಹೆಚ್ಚೆಚ್ಚು ಹುಡುಕಾಡಿ ಮಾಹಿತಿ ತಿಳಿದುಕೊಂಡಿದ್ದಾರೆ ಎಂದು ಸರ್ಚ್ ಇಂಜಿನ್ ಸಂಸ್ಥೆ ಯಾಹೂ ಮಾಹಿತಿ ನೀಡಿದೆ.
ಲಾಕ್ಡೌನ್ ಸಂದರ್ಭದಲ್ಲಿ ಭಾರತೀಯರು ಸರ್ಚ್ ಮಾಡಿರುವ ರೇಂಜ್, ವೆರೈಟಿ ನೋಡಿ ಸರ್ಚ್ ಇಂಜಿನ್ ಗೆ ತಲೆ ಕೆಡಿರಲೂ ಬಹುದು. ದಕ್ಷಿಣ ಕೊರಿಯಾ ಕಾಫಿ, ಪಾನಿಪುರಿಯಿಂದ ಹಿಡಿದು ಕನ್ನಿಕಾ ಕಪೂರ್ ತನಕ ಎಲ್ಲವೂ ಟ್ರೆಂಡ್ ಲಿಸ್ಟ್ ನಲ್ಲಿ ಕಾಣಿಸಿಕೊಂಡಿವೆ.
ಹಲವರಿಗೆ ಹೊಸ ಸಾಧ್ಯತೆಯನ್ನು ಲಾಕ್ಡೌನ್ ತೋರಿಸಿದೆ. ಫೇಸ್ಬುಕ್ ಲೈವ್ ಜೊತೆಗೆ ಇತ್ತೀಚೆಗೆ ಸೆಲೆಬ್ರಿಟಿಗಳು ಇನ್ಸ್ಟಾಗ್ರಾಮ್ ನಲ್ಲಿ ಮುಸ್ಸಂಜೆ ವೇಳೆ ಲೈವ್ ಬರೋದು ರೂಢಿಯಾಗಿಬಿಟ್ಟಿದೆ. ಫೇಸ್ಬುಕ್ ನಲ್ಲಿ ಡೆಲ್ಕೋನಾ ಕಾಫಿ, ಪಾನಿಪುರಿ ಅಲ್ಲದೆ, ಥರಾವರಿ ತಿಂಡಿ, ತಿನಿಸು ,ಕೇಕ್ ಗಳ ಚಿತ್ರಗಳು ತುಂಬಿ ಹೋಗಿವೆ. ಮುಂದಿನ ಮಾಸ್ಟರ್ ಶೆಪ್ ಸ್ಪರ್ಧೆಗೆ ಇಂಡಿಯನ್ಸ್ ಸಿದ್ಧ ಎಂಬ ಟ್ರಾಲ್ಸ್ ಭರ್ಜರಿಯಾಗಿ ಜನಪ್ರಿಯತೆ ಗಳಿಸಿವೆ. ಯಾಹೂ ಇಂಡಿಯಾ ಕಂಡಂತೆ 7 ಪ್ರಮುಖ ವಿಷಯಗಳ ಬಗ್ಗೆ ಟ್ರೆಂಡ್ ಉಂಟಾಗಿದೆ. ಈ 7 ವಿಷಯಗಳಲ್ಲಿ ಕನಿಷ್ಟ 5 ಕೀ ಪದಗಳನ್ನು ಸರ್ಚ್ ಮಾಡಲಾಗಿದೆ.. ಈ ಬಗ್ಗೆ ಇನ್ನಷ್ಟು ಮುಂದೆ ಓದಿ…
Read more at: https://kannada.oneindia.com/news/india/coronavirus-lockdown-top-search-by-indians-190575.html