ಅರ್ನಬ್, ಶಹೀನ್, ಗುಲಾಬ್, ಅಗ್ನಿ ಹೀಗೆ ಮುಂಬರುವ ಚಂಡಮಾರುತಗಳ ಹೆಸರುಗಳನ್ನು ಹವಾಮಾನ ಇಲಾಖೆ ಮುಂದಿಟ್ಟಿದೆ. ಸುಮಾರು 169 ಹೆಸರುಗಳನ್ನು 13 ರಾಷ್ಟ್ರಗಳು ನಿರ್ಧರಿಸಿವೆ. ಹಿಂದೂ ಮಹಾಸಾಗರ, ಅರೇಬಿಯನ್ ಸಮುದ್ರ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಈ ಚಂಡಮಾರುತ ಕಾಣಿಸಲಿವೆ.
ಸಾಮಾನ್ಯವಾಗಿ ಸ್ತ್ರೀನಾಮಗಳನ್ನೇ ಹೆಚ್ಚಾಗಿ ಚಂಡ ಮಾರುತಗಳಿಗೆ ಇಡಲಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಇದು ಅರ್ಧಸತ್ಯ ಮಾತ್ರ. ಪೂರ್ವ ನಿರ್ಧಾರಿತ ಪಟ್ಟಿಯಂತೆ ಅರ್ಧದಷ್ಟು ಮಾತ್ರ ಮಹಿಳೆಯರ ಹೆಸರಿರುತ್ತದೆ. ಮಿಕ್ಕಂತೆ ಪುರುಷರು, ಹಕ್ಕಿಗಳ ಹೆಸರನ್ನು ಇಡಲಾಗುತ್ತದೆ. ಹಿಂದೂ ಮಹಾ ಸಾಗರವನ್ನು ಹಂಚಿಕೊಂಡಿರುವ ರಾಷ್ಟ್ರಗಳು ಒಂದೊಂದಾಗಿ ಚಂಡಮಾರುತಕ್ಕೆ ಹೆಸರಿಡುವ ಅವಕಾಶ ಗಿಟ್ಟಿಸುತ್ತಾರೆ.
ಜನರು ಸುಲಭವಾಗಿ ನೆನಪಲ್ಲಿಟ್ಟುಕೊಳ್ಳಬಹುದಾದ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸರಳವಾದ ಹೆಸರನ್ನು ಬಳಸಲಾಗುತ್ತಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಚಂಡಮಾರುತಗಳಿಗೆ ಹೆಸರನ್ನಿಟ್ಟರೆ ಅದರ ಕಾಲ, ಗುಣ ಹೀಗೆ ಹಲವು ವಿಷಯಗಳನ್ನ ಸುಲಭವಾಗಿ ಸಂಗ್ರಹಿಸಿಡಬಹುದು ಎಂದು ಹವಾಮಾನ ತಜ್ಞರು ಹೇಳುತ್ತಾರೆ. ಅಗ್ನಿ, ಆಕಾಶ, ಬಿಜ್ಲಿ, ಜಲ್ ಅಲ್ಲದೆ, ಲೆಹರ್, ಮೇಘ್, ಸಾಗರ್, ವಾಯು ಭಾರತದ ಪಟ್ಟಿಯಲ್ಲಿದೆ. ನಿಲೋಫರ್, ತಿತ್ಲಿ, ಬುಲ್ ಬುಲ್ ಪಾಕಿಸ್ತಾನ ನೀಡಿದ ಹೆಸರುಗಳಾಗಿವೆ.
Read more at: https://kannada.oneindia.com/features/imd-issues-names-for-upcoming-cyclones-in-13-countries-190783.html