ಲಾಕ್ಡೌನ್ ನಡುವೆ ಹಂತ ಹಂತವಾಗಿ ಪ್ರಯಾಣಿಕರ ರೈಲುಗಳ ಸಂಚಾರಕ್ಕೆ ಭಾರತೀಯ ರೈಲ್ವೆ ಮುಂದಾಗಿದೆ. ಮೇ 12 ರಿಂದ ಒಂದಷ್ಟು ರೈಲುಗಳು ಸಂಚಾರ ಆರಂಭಿಸಿವೆ. ಜೂನ್ 1 ರಿಂದ 100 ಜೋಡಿಯ ಪ್ಯಾಸೆಂಜರ್ ರೈಲುಗಳು ಸಂಚರಿಸಲಿವೆ. ಈ ನಡುವೆ IRCTC ಮೂಲಕ ಆನ್ ಲೈನ್ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ರೈಲ್ವೆ ಇಲಾಖೆ ಶುಭ ಸುದ್ದಿ ನೀಡಿದೆ.
120 ದಿನಗಳಿಗೆ ವಿಸ್ತರಿಸಲಾಗಿದೆ. ಈ ಹೊಸ ನಿಯಮವು ಮೇ 12ರಿಂದ ಕಾರ್ಯ ನಿರ್ವಹಿಸುತ್ತಿರುವ ರೈಲುಗಳು ಹಾಗೂ ಜೂನ್ 1ರಿಂದ ಸಂಚರಿಸಲಿರುವ 200 ಕ್ಕೂ ಅಧಿಕ ರೈಲುಗಳಿಗೆ ಅನ್ವಯಿಸಲಿದೆ.
ಇದಲ್ಲದೆ, ಈ ಎಲ್ಲಾ 230ಕ್ಕೂ ಅಧಿಕ ರೈಲುಗಳಲ್ಲಿ ಪಾರ್ಸಲ್ ಹಾಗೂ ಲಗೇಜ್ ಬುಕಿಂಗ್ ಮಾಡಲು ಕೂಡಾ ಅವಕಾಶ ಇರಲಿದೆ ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ಮಿಕ್ಕಂತೆ ತತ್ಕಾಲ್ ಬುಕ್ಕಿಂಗ್, ಕರೆಂಟ್ ಬುಕ್ಕಿಂಗ್ ನಲ್ಲಿ ಯಾವುದೇ ಬದಲಾವಣೆಯಿಲ್ಲ. ಈ ಎಲ್ಲಾ ನಿಯಮಗಳು ಮೇ 31ರ ಬೆಳಗ್ಗೆ 8 ಗಂಟೆಯಿಂದ ಜಾರಿಗೆ ಬರಲಿದೆ.