ಆಗಸದ ಅತ್ಯಾಕರ್ಷಕ ವಿದ್ಯಮಾನಗಳಲ್ಲಿ ಗ್ರಹಣಗಳು ಕೂಡಾ ಒಂದು. 2020ರಲ್ಲಿ ಒಟ್ಟು ನಾಲ್ಕು ಚಂದ್ರಗ್ರಹಣಗಳು ಘಟಿಸಲಿವೆ. ಈ ಪೈಕಿ ಎರಡನೇ ಚಂದ್ರಗ್ರಹಣವು ಜೂನ್ 5 ಹಾಗೂ 6 ರ ರಾತ್ರಿ ಸಂಭವಿಸಲಿದೆ.
2020ರ ಮೊದಲ ಚಂದ್ರಗ್ರಹಣ ಜ.10ರಂದು ಸುಮಾರು ನಾಲ್ಕು ಗಂಟೆ ಐದು ನಿಮಿಷದ ಅವಧಿ ಕಾಲ ಭಾರತದಲ್ಲಿ ಗೋಚರವಾಗಿತ್ತು. ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 90ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗಿತ್ತು.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಉಂಟಾಗುವ ಈ ವಿದ್ಯಮಾನ, ವೀಕ್ಷಣೆಗೆ ಅತ್ಯಾಕರ್ಷಕವಾಗಿರುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬೀಳುವುದಕ್ಕೆ ಭೂಮಿ ಅಡ್ಡಿಪಡಿಸುತ್ತದೆ. ಈ ಬಾರಿಯ ಚಂದ್ರಗ್ರಹಣವನ್ನು Penumbral Lunar Eclipse/ Strawberry Moon Eclipse ಎಂದು ಕರೆಯಲಾಗುತ್ತಿದೆ. ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ. ಎಷ್ಟು ಅವಧಿ ಕಾಣಿಸಲಿದೆ? ಇನ್ನಷ್ಟು ವಿವರ ಮುಂದಿದೆ…