ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಬುಧವಾರ ಮಧ್ಯಾಹ್ನ ಬೆಚ್ಚಿ ಬೀಳುವಂತೆ ಮಾಡಿದ ಶಬ್ದದ ರಹಸ್ಯ ಬಯಲಾಗಿದೆ. ಬೆಂಗಳೂರನ್ನು ನಡುಗುವಂತೆ ಮಾಡಿದ ಶಬ್ದವು ಭೂಕಂಪದಿಂದ ಉಂಟಾಗಿದ್ದಲ್ಲ, ಬೇರೆ ಯಾವುದೇ ಸ್ಫೋಟವಲ್ಲ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಕೇಂದ್ರ(kSNDMC)ದ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು. ಆದರೆ, ಇನ್ನು ಸ್ಪಷ್ಟವಾದ ಉತ್ತರ ಸಿಕ್ಕಿರಲಿಲ್ಲ. ಸಂಜೆ ವೇಳೆಗೆ ಈ ಎಲ್ಲಾ ಗೊಂದಲ, ಕುತೂಹಲ, ರಹಸ್ಯಕ್ಕೆ ಭಾರತೀಯ ವಾಯುಸೇನೆ ತೆರೆ ಎಳೆದಿದೆ. ರಕ್ಷಣಾ ಇಲಾಖೆಯ ಬೆಂಗಳೂರಿನ ವಕ್ತಾರರು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್, ಟಿನ್ ಫ್ಯಾಕ್ಟರಿ, ಕೋರಮಂಗಲ, ಜಯನಗರ, ಎಚ್ ಎಸ್ ಆರ್ ಲೇ ಔಟ್, ಕೆ. ಆರ್ ಪುರಂ, ಬನ್ನೇರುಘಟ್ಟ ರಸ್ತೆ, ಮುಂತಾದೆಡೆ ಈ ಶಬ್ದ ಕೇಳಿ ಬಂದ ಶಬ್ದಕ್ಕೆ ಕಾರಣವಾಗಿದ್ದು ಯುದ್ಧ ವಿಮಾನ.
ಕೊರೊನಾವೈರಸ್ ನಿಂದ ಲಾಕ್ಡೌನ್ ಆಗಿದ್ದ ವಾಯುನೆಲೆಗಳು ಕೆಲದಿನಗಳಿಂದ ಕಾರ್ಯನಿರ್ವಹಿಸಲು ಆರಂಭಿಸಿವೆ. ಇಂದು ಮಧ್ಯಾಹ್ನದ ವೇಳೆ ಸುಖೋಯ್ 30 ಯುದ್ಧ ವಿಮಾನವೊಂದು ಬೆಂಗಳೂರಿನ ಉತ್ತರ ಭಾಗದಲ್ಲಿ ಹಾರಾಟ ನಡೆಸಿದೆ. ತೀರಾ ಕೆಳ ಮಟ್ಟದಲ್ಲಿ ಹಾರಾಟ ನಡೆಸಿದ್ದರಿಂದ ಅಗತ್ಯಕ್ಕಿಂತ ದೊಡ್ಡ ಮಟ್ಟದಲ್ಲಿ ಶಬ್ದ ಕೇಳಿಸಿರಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಎಚ್ಎಎಲ್ ತರಬೇತಿ ಕೇಂದ್ರ ಆರಂಭವಾಗಿದ್ದರೂ ಯಾವುದೇ ವಿಮಾನ ಹಾರಾಟವಾಗಿಲ್ಲ ಎಂದು ಸಂಸ್ಥೆ ಹೇಳಿದ್ದರಿಂದ ಕುತೂಹಲ ಇನ್ನಷ್ಟು ಹೆಚ್ಚಾಗಿತ್ತು.
Read more at: https://kannada.oneindia.com/news/bengaluru/sonic-boom-over-bengaluru-iaf-confirms-it-was-an-iaf-fighter-jet-192463.html