ದೆಹಲಿ- ಜೈಪುರ್ ಹೆದ್ದಾರಿಯಲ್ಲಿರುವ 8 ಎಕರೆ ಭೂಮಿ ಯಾರಿಗೆ ಸೇರಿದ್ದು ಎಂಬ ಸಿವಿಎಲ್ ಕೇಸ್ ಈಗ ಭಾರತದೆಲ್ಲೆಡೆ ಚರ್ಚೆಯಾಗುತ್ತಿದೆ. ಹೆದ್ದಾರಿಯ ಭೂ ಭಾಗ ನನಗೆ ಸೇರಿದ್ದು ಎಂದು ಚರಣ್ ಜೀತ್ ಸಿಂಗ್ ಎಂಬುವರು ಮೊಕದ್ದಮೆ ಹೂಡಿದ್ದಾರೆ.
2014ರಲ್ಲಿ ಹರ್ಯಾಣ ಸರ್ಕಾರ ವಶಪಡಿಸಿಕೊಂಡ ಈ ಭೂಮಿ ಈಗ ಹರ್ಯಾಣ ಪೊಲೀಸರನ್ನು ಪ್ರಶ್ನಾರ್ಥಕವಾಗಿ ಕಾಡುತ್ತಿದೆ. ಇದಕ್ಕಿಂತ ಹೆಚ್ಚಾಗಿ ಇದು ನನಗೆ ಸೇರಿದ ಜಾಗ ಎಂದು ಚರಣ್ ಜೀತ್ ಸಿಂಗ್ ಅವರಿಗೆ ಇನ್ನೇನು ಭೂಮಿ ನೀಡಬೇಕು ಎನ್ನುವಷ್ಟರಲ್ಲಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಸದರಿ ಭೂಮಿಗೆ ಹಕ್ಕುದಾರರಾರು ಎಂದು ಕ್ಲೇಮು ಮಾಡುತ್ತಿರುವವರ ಸಂಖ್ಯೆ 6 ಮಂದಿ ಚರಣ್ ಜೀತ್ ಸಿಂಗ್ ಸೇರಿ 13ಕ್ಕೇರಿದೆ.
ದೆಹಲಿ- ಜೈಪುರ್ ಹೆದ್ದಾರಿಯಲ್ಲಿರುವ 8 ಎಕರೆ ಜಾಗದ ಇಂದಿನ ಮಾರುಕಟ್ಟೆ ಬೆಲೆ 400 ಕೋಟಿ ರುಪಾಯಿ, ಈ 400 ಕೋಟಿ ರು ಆಸ್ತಿಗೆ ಚರಣ್ ಜೀತ್ ಸಿಂಗ್ ಎಂಬುವರು ಬಾಸ್. ಚರಣ್ ಜೀತ್ ಗೆ ಈ ಭೂಮಿ ಕೊಡಲು ಅಡ್ಡಿಯಾಗಿದ್ದು ಮತ್ತೊಬ್ಬ ಚರಣ್ ಜೀತ್ ಸಿಂಗ್, ಈ ಇಬ್ಬರು ಚರಣ್ ಜೀತ್ ಗೆ ಅಡ್ಡಿಯಾಗಿದ್ದು ಮತ್ತೆ ನಾಲ್ವರು ಚರಣ್ ಜೀತ್ ಸಿಂಗ್ ಗಳು. ಹೆಚ್ಚು ಗೊಂದಲಕ್ಕೀಡಾಗಬೇಡಿ.. ಮುಂದೆ ಓದಿ…
Read more at: https://kannada.oneindia.com/news/gurgaon/what-s-in-a-name-gurugram-plot-6-charanjeet-singhs-for-rs-400-crore-192072.html