ಋಗ್ವೇದ ಪೂರ್ವ ಕಾಲದಲ್ಲಿ ಸರಯೂ ನದಿ ತಟದಲ್ಲಿ ಅಯೋಧ್ಯಾ ನಗರ ನಿರ್ಮಿಸಿ, 3280 B.C.Eರಲ್ಲಿ ಸೂರ್ಯವಂಶವನ್ನು ರಾಜ ಇಕ್ಷ್ವಾಕು ಸ್ಥಾಪಿಸಿದ. ಆಗಿನ್ನು ಭಾರತಕ್ಕೆ ಭಾರತ ಎಂಬ ಹೆಸರು ಬಂದಿರಲಿಲ್ಲ. ಹೊರ ನಾಡಿನವರಿಗೆ ಇದು ಮೆಲೂಹ ದ್ವೀಪವಾದರೆ, ಇಲ್ಲಿದ್ದವರಿಗೆ ಇದು ಸಪ್ತ ನದಿಗಳ ನಾಡು ಎಂದು ಸಪ್ತಸಿಂಧು. ನಂತರ ಬ್ರಹ್ಮಾವರ್ತ, ಆರ್ಯಾವರ್ತ ಎಂದೆಲ್ಲ ಕರೆಯುತ್ತಿದ್ದರು. ದುಷ್ಯಂತನ ಮಗ ಭರತನ ಆಡಳಿತದಿಂದ ಭಾರತ ಎಂಬ ಹೆಸರಿನಿಂದ ಜನಜನಿತವಾಯಿತು.
ಕೃತ, ತ್ರೇತಾ, ದ್ವಾಪರ ಹಾಗೂ ಕಲಿಯುಗದ ತನಕ ಇಕ್ಷ್ವಾಕು ಕುಲ, ರಘು ವಂಶ ಉಳಿದುಕೊಂಡು ಬಂದಿದೆ. ಶ್ರೀರಾಮಚಂದ್ರ ತ್ರೇತಾಯುಗದಲ್ಲಿ ಆಡಳಿತ ನಡೆಸಿದ್ದು, ಮುಂದೆ ವಾಲ್ಮೀಕಿ ಮಹರ್ಷಿಗಳು ಸೇರಿದಂತೆ ಹಲವರು ರಾಮ, ಸೀತೆಯ ಕಥೆಯಾದ ರಾಮಾಯಣವನ್ನು ತಮ್ಮದೇ ರೀತಿಯಲ್ಲಿ ಮಹಾಕಾವ್ಯವನ್ನಾಗಿಸಿದ್ದಾರೆ.
ನಾಲ್ಕು ಯುಗಗಳಲ್ಲಿ ಕಂಡ ಇಕ್ಷ್ವಾಕು- ಸೂರ್ಯವಂಶದ ಪ್ರಮುಖ ಅರಸರ ವಿವರ ಇಲ್ಲಿದೆ.
ಋಗ್ವೇದ ಪೂರ್ವ ಕಾಲ- ಸಪ್ತಸಿಂಧು ಶಕ
- 3320 B.C.E- ಮನ್ವಂತರರ ರಾಜವಂಶ -ವೈವಸ್ವತ ಮನು
- 3280 B.C.E- ಇಕ್ಷ್ವಾಕು- ಸೂರ್ಯವಂಶ ಸ್ಥಾಪಕ, ಸರಯೂ ನದಿ ತಟದಲ್ಲಿ ಅಯೋಧ್ಯಾ ನಗರ ನಿರ್ಮಾತೃ.
- 3260 B.C.E- ವಿಕುಕ್ಷಿ
- 3240 B.C.E- ಪರಂಜಯ
- 3220 B.C.E- ಅನೇನ
- 3200 B.C.E- ಪೃಥು(ಪೃಥುಲಶ್ವ)
- 3180 B.C.E- ವಿಶ್ವಗಸ್ಯ
- 3160 B.C.E- ಆರ್ದ್ರ
- 3140 B.C.E- ಯುವನಾಶ್ವ
- 3120 B.C.E- ಶ್ರಾವಸ್ತ
- 3100 B.C.E- ಬೃಹದಾಶ್ವ
- 3080 B.C.E- ಕುವಲಾಶ್ವ
- 3060 B.C.E- ದೃಧಶ್ವ
- 3040 B.C.E- ವರ್ಯಶ್ವ
- 3020 B.C.E- ನಿಕುಂಭ
- 3000 B.C.E- ಸಮಂತಶ್ವ — ತಮಿಳ್ ಸಂಗಂ ಕಾಲ, ಪೂರ್ವ ವೇದ ಕಾಲ ಆರಂಭ.
- 2980 B.C.E- ಕೃಶಾಶ್ವ
- 2960 B.C.E-
- 2940 B.C.E- ಪ್ರಸೇನಜೀತ
- 2920 B.C.E- ಯೌವನಸ್ವ
- 2900 B.C.E- ಮಾಂಧಾತೃ –ಬೃಹಸ್ಪತಿ ಋಷಿ ಸಮಕಾಲೀನ
- 2880 B.C.E- ದುಷ್ಯಂತ (ಬೇರೆ ವಂಶಸ್ಥ)
- 2860 B.C.E- ಪುರಕುಸ್ತ, ಭರತ (ಬೇರೆ ವಂಶಸ್ಥ) ಸಮಕಾಲೀನ. ಸಪ್ತಸಿಂಧು, ಬ್ರಹ್ಮವರ್ತ, ಆರ್ಯಾವರ್ತ ಹೆಸರು ಭಾರತವರ್ಷ ಎಂದು ಬದಲಾವಣೆಯಾದ ಕಾಲ.
- 2840 B.C.E-
- 2820 B.C.E- ತ್ರಸದಸ್ಯು
- 2800 B.C.E-
- 2780 B.C.E- ಸಂಭೂತ
====ಋಗ್ವೇದ ಕಾಲ-ಕೃತ ಯುಗ====
- 2760 B.C.E- ವಿಷ್ಣುವೃದ್ಧ…..ಕಾಶಿ ನಗರ ನಿರ್ಮಾತೃ ರಾಜ ಕಶ ಸಮಕಾಲೀನ.
- 2740 B.C.E-ಅನರಣ್ಯ…..ಗಣಿತಜ್ಞ ಬೌಧಯಾನ ಸಮಕಾಲೀನ, ಪೈಥಾಗೊರಸ್ ಪ್ರಮೇಯ ಸೇರಿದಂತೆ ಹಲವು ವೇದ ಗಣಿತ ಸುಲಭ ಸೂತ್ರ ನೀಡಿದವ.
- 2720 B.C.E- ತ್ರಸದಾಶ್ವ
- 2700 B.C.E- ಎರಡನೇ ಹರ್ಯವಾಶ್ವ
- 2680 B.C.E- ಹಸ್ತ
- 2660 B.C.E- ರೋಹಿದಾಶ್ವ
- 2640 B.C.E-ವಸುಮನಸ್
- 2620 B.C.E- ತ್ರಿವೃಷಣ
- 2600 B.C.E- ತೃಯಋಣ
- 2580 B.C.E- ತ್ರಿಶಂಕು…..ಕನ್ಯಾಕುಬ್ಜ (ಪಶ್ಚಿಮ ಉ.ಪ್ರ) ರಾಜ ನಂತರ ಋಷಿಯಾದ ವಿಶ್ವಾಮಿತ್ರ ಸಮಕಾಲೀನ.
- 2560 B.C.E- ಹರಿಶ್ಚಂದ್ರ…. ಪರಶುರಾಮ ಸಮಕಾಲೀನ
- 2540 B.C.E- ರೋಹಿತಾಶ್ವ
- 2520 B.C.E- ಹರಿತ
- 2500 B.C.E- ಕಂಕು
- 2480 B.C.E- ವಿಜಯ
- 2460 B.C.E- ಋಣಕ
- 2440 B.C.E- ವೃಕ
- 2420 B.C.E- ಬಾಹು
- 2400 B.C.E- ಸಗರ… ಕಪಿಲ ಋಷಿ ಸಮಕಾಲೀನ. ..ಸಗರನ ಅಶ್ವಮೇಧ ಕುದುರೆ ಕಟ್ಟಿ ಹಾಕಿ, ಸಾವಿರಾರು ಸೈನಿಕರನ್ನು ಹತಗೊಳಿಸಿದ. ಮೃತ ಸೈನಿಕರು ಮೋಕ್ಷ ಸ್ಥಿತಿ ತಲುಪಲು ಅವರ ಚಿತಾಭಸ್ಮದ ಮೇಲೆ ಗಂಗಾ ನದಿ ಸ್ಪರ್ಶ ಅಗತ್ಯ ಎಂದು ಸಗರನ ಮೊಮ್ಮಗ ಅಂಶುಮಂತ..
- 2380 B.C.E- ಅಸಮಂಜಸ
- 2360 B.C.E- ಅಂಶುಮಾನ್
- 2340 B.C.E- ದಿಲೀಪ
====ಋಗ್ವೇದ ಕಾಲ-ತ್ರೇತಾ ಯುಗ====
- 2320 B.C.E- ಭಗೀರಥ
- 2300 B.C.E- ಶ್ರುತ
- 2280 B.C.E- ನಭಂಗ
- 2260 B.C.E- ಅಂಬರೀಶ… ದೂರ್ವಾಸ ಮುನಿ ಸಮಕಾಲೀನ…
- 2240 B.C.E- ಸಿಂಧುದ್ವೀಪ
- 2220 B.C.E- ಅಯುತಾಶ್ವ
- 2200 B.C.E- ಋತುಪರ್ಣ…. ಮನು ಸಮಕಾಲೀನ
- 2180 B.C.E- ಸರ್ವಕಾಮ
- 2160 B.C.E- ಸುದಾಸ
- 2140 B.C.E- ಮಿತ್ರಸಹ
- 2120 B.C.E- ಅಶ್ಮಕ
- 2100 B.C.E- ಉಕ್ರಮ….ಗುಜರಾತಿನ ಲೋಥಲ್ ನಗರ ಸಮಕಾಲೀನ.
- 2080 B.C.E- ಮೂಲಕ
- 2060 B.C.E- ದಶರಥ
- 2040 B.C.E- ಇಲಿವಿಲ
- 2020 B.C.E- ಕೃತಶರ್ಮ
- 2000 B.C.E- ವಿಶ್ವಸಹ
- 1980 B.C.E- ದಿಲೀಪ.. ಮಗಧ ರಾಜಕುಮಾರಿ ಸುದಕ್ಷೀಣಳನ್ನು ವರಿಸಿದ.
- 1960 B.C.E- ದೀರ್ಘಬಾಹು
- 1940 B.C.E- ರಘು
- 1920 B.C.E- ಅಜ-ಇಂದುಮತಿ.. ಯಜ್ಞವಲ್ಕ್ಯ ಋಷಿ, ಅಶ್ವಲೋಮ ರಾಜ, ವಶಿಷ್ಠ ಮಹರ್ಷಿ ಸಮಕಾಲೀನರು.
- 1900 B.C.E- ದಶರಥ…. ವಾಲಿ, ಸುಗ್ರೀವ, ಸಿರಿಧ್ವಜ ಜನಕ, ರಾವಣ.. ಗಾರ್ಗಿ ಸಮಕಾಲೀನ.ಸ್
- 1880 B.C.E- ರಾಮಚಂದ್ರ….ಹನುಮಂತ, ಜಾನಕಿ, ಅಂಗದ ಸಮಕಾಲೀನರು.
- ====ಋಗ್ವೇದ ಕಾಲ-ದ್ವಾಪರ ಯುಗ====
1860 B.C.E- ಸ್ಕೌಸಲ ಅಧಿಪತಿಯಾದ ಕುಶ..ಕುಶಪುರ(ಕಸೂರ್) ಪಟ್ಟಣ ನಿರ್ಮಿಸಿದ. ಲವಪುರ(ಇಂದಿನ ಲಾಹೋರ್) ಪಟ್ಟಣ ನಿರ್ಮಿಸಿ ಅಲ್ಲಿ ರಾಜ್ಯಭಾರ ಮಾಡಿದ.. ಇಂದಿನ ಮೇವಾರ್ ಸಂತತಿ. - 1300 B.C.E- ಬೃಹದ್ಬಲ.. ಶ್ರೀಕೃಷ್ಣನಿಂದ ತರಬೇತಿ ಪಡೆದು ಪಾಂಡವರ ಪರ ಹೋರಾಡಿದ ರಾಮನ ಕುಲದ ರಾಜ.
====ಕಲಿಯುಗ====
650 B.C.E- ವಾಲ್ಮೀಕಿ
600 B.C.E- ವತ್ಸ…ರಘು ಕುಲದ ಕೊನೆ ಸಂತತಿ
—ಮೂಲ ಆಂಗ್ಲ ಸಂಗ್ರಹಕಾರರು: ರಾಜ್ ಮೋಹಂಕ—